
ಮೊರಂಗಲ್ಲು ಶ್ರೀ ಧೂಮಾವತಿ ಸಪರಿವಾರ ದೈವಸ್ಥಾನದಲ್ಲಿ ನೂತನ ತರವಾಡು ಮನೆಯ ಗೃಹಪ್ರವೇಶ ಮತ್ತು ನೇಮೋತ್ಸವದ ಪೂರ್ವಭಾವಿಯಾಗಿ ಮಾ.29 ರಂದು ವಿಶ್ವ ಕರ್ಮಪೂಜೆಯು ಕೇಶವ ಆಚಾರ್ಯ ರವರ ನೇತೃತ್ವದಲ್ಲಿ ನಡೆಯಿತು.

ಮರುದಿನ ಬೆಳಗ್ಗೆ ಹಸಿರುವಾಣಿ ಸಮರ್ಪಣೆಯ ಮೆರವಣಿಗೆಯು ಮುಖ್ಯ ದ್ವಾರದ ಬಳಿಯಿಂದ ಕಾಲ್ನಡಿಗೆಯಲ್ಲಿ ದೈವಸ್ಥಾನದ ತನಕ ಸಾಗಿ ಬಂತು. ಮೆರವಣಿಗೆಯಲ್ಲಿ ಕುಟುಂಬದವರು ತಮ್ಮ ವಾಹನಗಳಲ್ಲಿ ದೂರದ ಊರಿನಿಂದ ಹಸಿರು ಕಾಣಿಕೆ ತಂದು ಸಮರ್ಪಿಸಿದರು.
ಬಳಿಕ ಅರ್ಚಕ ಹರ್ಷಿತ್ ಬನ್ನಿಂತಾಯ ರವರ ನೇತೃತ್ವದಲ್ಲಿ ಉಗ್ರಾಣ ಪೂಜೆಯು ನಡೆದು ಉಗ್ರಾಣ ತುಂಬುವ ಕಾರ್ಯಕ್ರಮವು ನಡೆಯಿತು.




ಈ ಸಂದರ್ಭದಲ್ಲಿ ಕುಟುಂಬದ ಯಜಮಾನರಾದ ಉಮೇಶ್ ಶೆಟ್ಟಿ, ದೈವಸ್ಥಾನದ ಅಧ್ಯಕ್ಷ ಗುರುಪ್ರಸಾದ್ ರೈ ಮೊರಂಗಲ್ಲು, ಶ್ರೀಮತಿ ಪುಷ್ಪಾವತಿ ಗುರುಪ್ರಸಾದ್ ರೈ, ವಿಶ್ವನಾಥ ರೈ ಮೊರಂಗಲ್ಲು, ಪ್ರಪುಲ್ಲ ರೈ ಮೊರಂಗಲ್ಲು, ಪ್ರೀತಮ್ ಶೆಟ್ಟಿ , ಆಶಿತಾ ಪಿ.ಶೆಟ್ಟಿ ಮೊರಂಗಲ್ಲು, ಜ್ಯೋತಿ ರೈ,
ನೀಮಾ ಪ್ರಶಾಂತ್ ಆಶಿಕ್ ರೈ ಮತ್ತು ಮೊರಂಗಲ್ಲು ಕುಟುಂಬದ ಸದಸ್ಯರು, ಉತ್ಸವ ಸಮಿತಿಯ ಸಂಚಾಲಕರು ಮತ್ತು ಸದಸ್ಯರು ಹಾಗೂ ಮೊರಂಗಲ್ಲು ಬೈಲಿನವರು ಮತ್ತು ಗ್ರಾಮಸ್ಥರು ಭಾಗವಹಿಸಿದರು. ಆಗಮಿಸಿದ ಎಲ್ಲರಿಗೂ ಮೊರಂಗಲ್ಲು ತರವಾಡು ಮನೆಯ ವತಿಯಿಂದ ಕೇಸರಿ ಶಾಲು ನೀಡಿ ಗೌರವಿಸಲಾಯಿತು. ಮಧ್ಯಾಹ್ನ ಅನ್ನ ಸಂತರ್ಪಣೆಯು ನಡೆಯಿತು.