ರಾಜ್ಯದ ವಿದ್ಯಾರ್ಥಿಗಳ ಹಕ್ಕುನ್ನು ರಕ್ಷಿಸುವ ಮತ್ತು ಅವರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಅನ್ವಿತ್ ಕಟೀಲ್ ನೇತೃತ್ವದಲ್ಲಿ ವಿದ್ಯಾರ್ಥಿ ನ್ಯಾಯ ಯಾತ್ರೆ ಪ್ರಯುಕ್ತ ವಿವಿಧ ಕಾಲೇಜು ಭೇಟಿ ಕಾರ್ಯಕ್ರಮ ಸುಳ್ಯದಲ್ಲಿ ನಡೆಯಿತು.

ಕಾಲೇಜುಗಳಿಗೆ ಭೇಟಿ ನೀಡಿದ ತಂಡದವರು ಕಾಲೇಜಿನ ಮುಖ್ಯಸ್ಥ ರೊಂದಿಗೆ ವಿದ್ಯಾರ್ಥಿ ನ್ಯಾಯ ಯಾತ್ರೆ ಕುರಿತು ಮಾತನಾಡಿದರು.
ಎ.2ರಂದು ವಿದ್ಯಾರ್ಥಿ ನ್ಯಾಯ ಯಾತ್ರೆಯ ಪೋಸ್ಟರ್ ನ್ನು ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ ಅನಾವರಣಗೊಳಿಸಿದರು.



ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಯ ತಾಲೂಕು ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ಇಂಟೆಕ್ ಕಾಂಗ್ರೆಸ್ ಸುಳ್ಯ ವಿಧಾನಸಭಾ ಕ್ಷೇತ್ರಾಧ್ಯಕ್ಷ ಶಾಫಿ ಕುತ್ತಮೊಟ್ಟೆ, ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆ, ಪಂಚಾಯತ್ ರಾಜ್ ಸಂಘಟನೆಯ ತಾಲೂಕು ಪ್ರಧಾನ ಕಾರ್ಯದರ್ಶಿ ಭವಾನಿಶಂಕರ್ ಕಲ್ಮಡ್ಕ, ಲತೀಫ್ ಅಡ್ಕಾರು, ಉಬೈಸ್ ಗೂನಡ್ಕ, ಆಶಿಕ್ ಅರಂತೋಡು, ಗೋಕುಲ್ ದಾಸ್ , ಎನ್.ಎಸ್.ಯು.ಐ. ವಿದ್ಯಾರ್ಥಿ ನಾಯಕರಾದ ಹೃತಿಕ್ ರವಿ, ಮನೀಶ್ ಜಿ ರಾಜ್, ಅನ್ವಿತ್ ಕಟೀಲ್ , ಶಿವಕುಮಾರ್
ಮೊದಲಾದವರಿದ್ದರು.