ಸರಕಾರಿ ಪ್ರಥಮ ದರ್ಜೆ ಕಾಲೇಜ ಸುಳ್ಯ ಇಲ್ಲಿನ ಐ.ಕ್ಯೂ.ಎ.ಸಿ ವಿಭಾಗ ಹಾಗೂ ವಾಣಿಜ್ಯ ವಿಭಾಗದ ವತಿಯಿಂದ ವಾಣಿಜ್ಯ ವಿಭಾಗದ ಅಂತಿಮ ತರಗತಿ ವಿದ್ಯಾರ್ಥಿಗಳಿಗೆ ಸ್ಫರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಬಗ್ಗೆ ಒಂದು ದಿನದ ಕಾರ್‍ಯಾಗಾರ ಮಾ. ೨೮ರಂದು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

ಕಾರ್‍ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಸತೀಶ್ ಕುಮಾರ್ ಕೆ ಆರ್ ವಹಿಸಿದ್ದರು. ಸ್ಫರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಬಗ್ಗೆ ಸುಧಾನ ಪದವಿ ಪೂರ್ವ ಕಾಲೇಜು ಪುತ್ತೂರು ಇಲ್ಲಿಯ ಉಪನ್ಯಾಸಕ ಹಾಗೂ ಸ್ಮಾರ್‍ಟ್ ಆನ್ ಲೈನ್ ತರಗತಿಯ ಸಂಯೋಜಕರಾದ ಮುಕುಂದಕೃಷ್ಣ ಹಾಗೂ ತರಬೇತುದಾರೆ ಕುಮಾರಿ ಜ್ಯೋತಿ ವಿ ಮಾಹಿತಿ ನೀಡಿದರು.

ಕಾರ್‍ಯಾಗಾರದ ನೇತೃತ್ವವನ್ನು ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಡಾ| ಶೈಲಜಾ ಎನ್ ಆರ್ ವಹಿಸಿದ್ದರು. ವೇದಿಕೆಯಲ್ಲಿ ಕಾಲೇಜಿನ ಐ.ಕ್ಯೂ.ಎ.ಸಿ ವಿಭಾಗದ ಸಂಚಾಲಕರಾದ ಡಾ| ಪ್ರೀತಿ ಕೆ ರಾವ್, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಗಳಾದ ಉದಯಶಂಕರ ಹೆಚ್ ಉಪಸ್ಥಿತರಿದ್ದರು.
ಕಾರ್‍ಯಕ್ರಮದಲ್ಲಿ ವಿದ್ಯಾರ್ಥಿಗಳು ಪ್ರಾರ್ಥಿಸಿದರು, ಕು.ಯೋಗಿತಾ ಸ್ವಾಗತಿಸಿ, ಕು.ಚುಂಪಿತಾ ವಂದಿಸಿದರು, ಕುಮಾರಿ ವೀಣಾ ಹಾಗೂ ಅಶ್ವಿನಿ ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿದರು. ಭರತ್ ಕೆ. ಕಾರ್‍ಯಕ್ರಮ ನಿರೂಪಿಸಿದರು. ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಕಾರ್‍ಯಕ್ರಮದಲ್ಲಿ ಉಪಸ್ಥಿತರಿದ್ದರು.