ಕರ್ನಾಟಕ ಆರ್ಗ್ಯಾನಿಕ್ ಫೌಂಡೇಷನ್
ಸುಳ್ಯ ,ಕಡಬ,ಪುತ್ತೂರು ತಾಲೂಕು ವ್ಯಾಪ್ತಿಯ ಎಲ್ಲಾ ಹೋಬಳಿ ಗ್ರಾಮದ ಪ್ರದೇಶದ ಬಡ ಕುಟುಂಬದ ವಿದ್ಯಾವಂತ ಯುವಕರಿಗೆ ಹಾಗೂ ಮಹಿಳೆಯರಿಗೆ ಯಾವುದೇ ಒಂದು ರೂಪಾಯಿ ಕೂಡ ಬಂಡವಾಳ ಅವರು ಹಾಕದೆ ಉದ್ಯಮಗಳನ್ನು ಬೆಳೆಸಲು ತೀರ್ಮಾನಿಸಲಾಗಿದೆ. ಸಂಪೂರ್ಣ ಕರ್ನಾಟಕ ಸಾವಯುವ ಕೃಷಿ ಯೋಜನೆ ವತಿಯಿಂದ ಉದ್ಯಮ ಮಾಡುವವರಿಗೆ ಸುಮಾರು 5 ಲಕ್ಷಕ್ಕೂ ಮಿಗಿಲಾದ ಬಂಡವಾಳ ಹೂಡಿಕೆ ಮಾಡಿ ಅವರನ್ನು ಯೋಜನೆಯ ಕೃಷಿ ಅಧಿಕಾರಿಗಳು ಹುದ್ದೆಗೆ ನಿಯೋಜನೆ ಮಾಡಿ ಅವರಿಗೆ ಆ ಮೂಲಕ 35,000- 40,000 ಕ್ಕೂ ಹೆಚ್ಚು ಮಾಸಿಕ ವೇತನ ಜೊತೆಗೆ ವಾರ್ಷಿಕವಾಗಿ ಕನಿಷ್ಠ 5 ಲಕ್ಷಕ್ಕೂ ಹೆಚ್ಚು ಆದಾಯ ವ್ಯವಸ್ಥೆ ನಿರ್ಮಾಣ ಮಾಡುವ ಮೂಲಕ ಅವರಿಗೆ ಆತ್ಮನಿರ್ಭರ ಭಾರತ ಯುವ ಕೌಶಲ್ಯ ಅಭಿವೃದ್ಧಿ ಯೋಜನೆ ಸಾಕಾರ ಮಾಡಲಾಗುತ್ತದೆ ಎಂದು ಯೋಜನೆಯ ಆಡಳಿತ ನಿರ್ದೇಶಕರು ಮೋಹನ್ ಕುಮಾರ್ ಬಿ.ಎ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರ್ನಾಟಕ ಸಾವಯುವ ಕೃಷಿ ಯೋಜನೆ ಈಗಾಗಲೇ ರಾಜ್ಯಾದ್ಯಂತ 9 ಜಿಲ್ಲಾ ವ್ಯಾಪ್ತಿಯಾದ ದ.ಕ.,ಉಡುಪಿ ಕಾಸರಗೋಡು ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ,ಚಿಕ್ಕಮಗಳೂರು, ಉತ್ತರ ಕನ್ನಡ ಮಂಡ್ಯ ಜಿಲ್ಲಾ ವ್ಯಾಪ್ತಿಯಲ್ಲಿ 250ಕ್ಕೂ ಹೆಚ್ಚಿನ ಶಾಖೆ ಹೊಂದಿದ್ದು ಸುಳ್ಯದಲ್ಲಿ ಕೂಡ ಕಳೆದ 5 ವರ್ಷದಿಂದ ಅತ್ಯುತ್ತಮ ರೀತಿಯಲ್ಲಿ ರೈತರೊಂದಿಗೆ ಕಾರ್ಯನಿರ್ವಹಣೆ ಮಾಡುತ್ತಿರುವುದು ನಮಗೆ ಹೆಮ್ಮೆ ಇದೆ ಎಂದಿದ್ದಾರೆ.
ಹಾಗಾಗಿ ಆಸಕ್ತಿ ಇರುವ ತಾಲ್ಲೂಕಿನ ಬಡ ಕುಟುಂಬದ SSLC ,PUC ಮಾತ್ರ ಓದಿರುವ ಮಹಿಳೆಯರು ಯುವಕರು ಯೋಜನೆಯ ವಾಟ್ಸಾಪ್ ಸಂಖ್ಯೆ 7022560060 ಇದಕ್ಕೆ ತಮ್ಮ ಹೆಸರು, ಗ್ರಾಮ ,ತಾಲೂಕು ಬರೆದು ಕಳುಹಿಸಿ ಕೊಟ್ಟಲ್ಲಿ ಯೋಜನೆಯ ವತಿಯಿಂದ ಅರ್ಜಿ ಫಾರಂ ಕಳುಹಿಸಿ ಕೊಡಲಾಗುವುದು ನಂತರ ಸುಳ್ಯ ದ ಹಿರಿಯ ಅಧಿಕಾರಿಗಳು ಆಸಕ್ತ ಅಭ್ಯರ್ಥಿ ಗಳ ಊರಿಗೆ ಬಂದು ಮಾಹಿತಿ ತರಬೇತಿ ಕೊಟ್ಟು ಹೋಗಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.