
ಕೌಸ್ತುಭ ಕಲಾ ಟ್ರಸ್ಟ್ ಕೂಜುಗೋಡು ಸುಬ್ರಹ್ಮಣ್ಯ ಅವರ ಆಯೋಜನೆಯಲ್ಲಿ ಎ.4 ರಿಂದ ಎ.11 ರ ವರೆಗೆ ಹರಿಹರೇಶ್ವರ ದೇವಾಲಯಲ್ಲಿ ನಡೆಯಲಿರುವ ಮಕ್ಕಳ ಬೇಸಿಗೆ ಶಿಬಿರ ‘ಕಲರವ” ಮಾ.4 ರಂದು ಉದ್ಘಾಟನೆಗೊಂಡಿತು.

ಹರಿಹರೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿ ಸದಸ್ಯ ಚಂದ್ರಹಾಸ ಶಿವಾಲ ದೀಪ ಬೆಳಗಿಸಿ ಉದ್ಘಾಟಿಸಿದರು.

ಹರಿಹರೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕಿಶೋರ್ ಕುಮಾರ್ ಕೂಜುಗೋಡು ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ
ಸುಬ್ರಹ್ಮಣ್ಯ ಐನೆಕಿದು ಪ್ರಾ.ಕೃ.ಪ.ಸ.ಸಂಘದ ನಿರ್ದೇಶಕ ಜಯಪ್ರಕಾಶ್ ಕೂಜುಗೋಡು, ಹರಿಹರೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿ ಸದಸ್ಯೆ ಶ್ರೀಮತಿ ರೇಷ್ಮಾ ಕಟ್ಟೆಮನೆ, ವಕೀಲರಾದ ಮಧುಸೂದನ್ ಕಾಪಿಕಾಡು ಉಪಸ್ಥಿತರಿದ್ದರು. ಶಿಬಿರ ಸಂಯೋಜಕಿ ಶ್ರೀಮತಿ ವನಿತಾ ಉದಯಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.