ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 1913 ರಲ್ಲಿ ಆರಂಭಗೊಂಡು 4 ಕಂದಾಯ ಗ್ರಾಮಗಳ ಕಾರ್ಯವ್ಯಾಪ್ತಿ ಹೊಂದಿದೆ. 2024-25 ನೇ ಸಾಲಿನಲ್ಲಿ ಸಂಘದಲ್ಲಿ 4520 ಸದಸ್ಯರಿದ್ದು, ಶೇರು ಹಣವು 8.99 ಕೋಟಿ ರೂ ಇದೆ.
ಸದಸ್ಯರ ಠೇವಣಿ 53.43 ಕೋಟಿ ರೂ ಇದ್ದು ಸದಸ್ಯರ ಹೊರಬಾಕಿ ಸಾಲವು 88.88 ಕೋಟಿ ರೂ ಇರುತ್ತದೆ. ಹಾಗೂ ಸಾಲ ವಸೂಲಾತಿ ಪ್ರಮಾಣವು ಶೇ.98.04 ಆಗಿದೆ. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನ ಸಾಲ ರೂ.41.76 ಕೋಟಿಯಿದ್ದು ಸಂಘದಲ್ಲಿ 137 ಸ್ವ ಸಹಾಯ ಸಂಘಗಳು ಇರುತ್ತವೆ.ಸಂಘದ ದುಡಿಯುವ ಭಂಡವಾಳವು 110.69 ಕೋಟಿ ರೂ ಹಾಗೂ 2024-25 ನೇ ಸಾಲಿನ ಒಟ್ಟು ವ್ಯವಹಾರವು 531.75 ಕೋಟಿ ರೂ ಆಗಿದೆ ಮತ್ತು ಈ ಸಾಲಿನಲ್ಲಿ ಅಂದಾಜು 2.17 ಕೋಟಿ ರೂ ಲಾಭ ಬಂದಿದೆ ಎಂದು ಸಂಘದ ಅಧ್ಯಕ್ಷ ಚಂದ್ರಶೇಖರ ಶಾಸ್ತ್ರಿ ಯವರು ಎ.31.ರಂದು ಜರುಗಿದ ಆಡಳಿತ ಮಂಡಳಿ ಸಭೆಯ ಬಳಿಕ ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದರು.ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಸದಾನಂದ ಕಾರ್ಜ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೇಮಿರಾಜ ಪಲ್ಲೋಡಿ ,ನಿರ್ದೇಶಕರಾದ ಸುಬ್ರಮಣ್ಯ ಕುಳ, ಲಿಗೋಧರ ಆಚಾರ್ಯ ನಾಯರ್ ಕೆರೆ. ಚಿನ್ನಪ್ಪ ಗೌಡ ಚೊಟ್ಟೆಮಜಲು , ವಾಚಣ್ಣ ಕೆರೆಮೂಲೆ ಮುದರ ಐವತ್ತೊಕ್ಲು , ಆರುಣ ರೈ ಕೇನ್ಯ, ವಾಸುದೇವ ಗೌಡ ಕೆರೆಕ್ಕೋಡಿ, ತಿಮ್ಮಪ್ಪ ಗೌಡ ಕೂತ್ಕುಂಜ ,ಶ್ರೀಮತಿ ವನಿತಾ ಅತ್ಯಡ್ಕ, ಶ್ರೀಮತಿ ಬೇಬಿ ಕಟ್ಟ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.