Home Uncategorized ಅಂಚೆ ಇಲಾಖೆಯಿಂದ ಪತ್ರ ಲೇಖನ ಸ್ಪರ್ಧೆ

ಅಂಚೆ ಇಲಾಖೆಯಿಂದ ಪತ್ರ ಲೇಖನ ಸ್ಪರ್ಧೆ

0

ಸುಳ್ಯಕ್ಕೆ ರಾಜ್ಯ ಮಟ್ಟದ ತೃತೀಯ ಬಹುಮಾನ

ಭಾರತೀಯ ಅಂಚೆ ಇಲಾಖೆ ವತಿಯಿಂದ ನಡೆದ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪತ್ರ ಲೇಖನ ಸ್ಪರ್ಧೆ ಢಾಯಿ ಆಖರ್ – 2024 ಇದರಲ್ಲಿ ಸುಳ್ಯ ಅಂಚೆ ಉಪ ವಿಭಾಗ ವ್ಯಾಪ್ತಿಯ ಅಮರಮುಡ್ನೂರು ಗ್ರಾಮದ ಶೇಣಿಯ ಕಾವ್ಯಶ್ರೀ ಬಿ ರಾಜ್ಯ ಮಟ್ಟದಲ್ಲಿ ತೃತೀಯ ಬಹುಮಾನ ಪಡೆದಿದ್ದಾರೆ.

ಕಾವ್ಯಶ್ರೀಯವರಿಗೆ ಎ. 2 ರಂದು ಅವರ ಶೇಣಿ ಮನೆಯಲ್ಲಿ ಸುಳ್ಯಉಪ ವಿಭಾಗದ ಅಂಚೆ ನಿರೀಕ್ಷಕರಾದ ವಿನೋದ್ ಕುಮಾರ್ ರವರು ಬಹುಮಾನದ ಚೆಕ್ ವಿತರಿಸಿದರು. ಸುಳ್ಯ ಅಂಚೆ ಮೇಲ್ವಿಚಾರಕರಾದ ಬಾಬು. ಎಸ್, ರಮೇಶ್, ತೊಡಿಕಾನ ಅಂಚೆಪಾಲಕ ದೇವಪ್ಪ ಹೈದಂಗೂರು, ಚೊಕ್ಕಾಡಿ ತಾತ್ಕಾಲಿಕ ಅಂಚೆ ವಿತರಕಿ ಹೇಮಲತಾ, ಕಾವ್ಯಶ್ರೀಯವರ ಪತಿ ಕಡಬದಲ್ಲಿ ಆದರ್ಶ ವಿವಿದೋದ್ದೇಶ ಸಹಕಾರ ಸಂಘದ ಉದ್ಯೋಗಿ ಅಶ್ವಿನ್ ರೈ ಹಾಗೂ ಮನೆಯವರು ಉಪಸ್ಥಿತರಿದ್ದರು. ಕಾವ್ಯಶ್ರೀ ಯವರು ಕಡಬದಲ್ಲಿ ರಾಮಕೃಷ್ಣ ಸಹಕಾರಿ ಸಂಘದ ಉದ್ಯೋಗಿ.

NO COMMENTS

error: Content is protected !!
Breaking