Home ಚಿತ್ರವರದಿ ಗಾಳಿ ಮಳೆ : ಅಮ್ಚಿನಡ್ಕ, ಪಂಜಿಗುಂಡಿ, ದೊಡ್ಡೇರಿಯಲ್ಲಿ ವಿದ್ಯುತ್ ಕಂಬದ ಮೇಲೆ ಮುರಿದು ಬಿದ್ದ ಮರ

ಗಾಳಿ ಮಳೆ : ಅಮ್ಚಿನಡ್ಕ, ಪಂಜಿಗುಂಡಿ, ದೊಡ್ಡೇರಿಯಲ್ಲಿ ವಿದ್ಯುತ್ ಕಂಬದ ಮೇಲೆ ಮುರಿದು ಬಿದ್ದ ಮರ

0

ರಿಪೇರಿ ಕಾರ್ಯ ನಡೆಯುತ್ತಿದೆ. ರಾತ್ರಿಯೇ ವಿದ್ಯುತ್ ಸರಬರಾಜು : ಮೆಸ್ಕಾಂ

ಇಂದು ಸುರಿದ ಗಾಳಿ ಮಳೆಗೆ ಸುಳ್ಯಕ್ಕೆ ವಿದ್ಯುತ್ ಸರಬರಾಜು ಆಗುವ 33 ಲೈನ್ ಮೇಲೆ ಅಮ್ಚಿನಡ್ಕ, ಪಂಜಿಗುಂಡಿ ಹಾಗೂ ದೊಡ್ಡೇರಿಯಲ್ಲಿ ಮರ ಮುರಿದು ಬಿದ್ದು, ವಿದ್ಯುತ್ ಕಂಬವು ನೆಲಕ್ಕುರುಳಿದೆ. ರಿಪೇರಿ ಕಾರ್ಯ ನಡೆದ ಬಳಿಕ ವಿದ್ಯುತ್ ಸರಬರಾಜು ರಾತ್ರಿಯೇ ಆಗುವುದು ಎಂದು ಮೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ದಿನ ಸಂಜೆ 5 ಗಂಟೆಯಿಂದ ಬಾರೀ ಗಾಳಿ‌ಮಳೆ ಸುರಿದ ಪರಿಣಾಮ ಮರಗಳು ತುಂಡಾಗಿ ವಿದ್ಯುತ್ ಲೈನ್ ಮೇಲೆ ಬಿದ್ದಿದೆ. ಮರ ತೆರವು ಕಾರ್ಯ ನಡೆಯುತ್ತಿದ್ದು, ಬಳಿಕ ವಿದ್ಯುತ್ ಲೈನ್ ಕಾಮಗಾರಿ ನಡೆದು, ವಿದ್ಯುತ್ ಸರಬರಾಜು ಮಾಡಲಾಗುವುದು ಎಂದು ಮೆಸ್ಕಾಂ ಅಧಿಕಾರಿಗಳು ‌ಮಾಹಿತಿ ನೀಡಿದ್ದಾರೆ.

NO COMMENTS

error: Content is protected !!
Breaking