ಶಿಕ್ಷಕಿ ಚಂದ್ರಕಲಾ ನಂಗಾರುರವರಿಗೆ ಚಂದನ ರಾಜ್ಯೋತ್ಸವ ರತ್ನ ಪ್ರಶಸ್ತಿ ಪ್ರದಾನ

0

ಚಂದನ ಸಾಹಿತ್ಯ ವೇದಿಕೆ ಹಾಗೂ ಲಾಲ್ ಬಹುದ್ದೂರ್ ಶಾಸ್ತ್ರಿ ಕಲಾ ಸಾಂಸ್ಕೃತಿಕ ಸಂಘದ ವತಿಯಿಂದ ಕರ್ನಾಟಕ ಸುವರ್ಣ ಸಂಭ್ರಮ- 50 ಕಾರ್ಯಕ್ರಮ ನ.26ರಂದು ಸುಳ್ಯದ ದೇವಮ್ಮ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ನಡೆಯಿತು.

ಇದೇ ಸಂದರ್ಭ ಚಂದನ ರಾಜ್ಯೋತ್ಸವ ರತ್ನ ಪ್ರಶಸ್ತಿಯನ್ನು ಕನ್ನಡ ಉಪನ್ಯಾಸಕಿ ಶ್ರೀಮತಿ ಚಂದ್ರಕಲಾ ಡಿ ನಂಗಾರುರವರಿಗೆ ಪ್ರಧಾನ ಮಾಡಲಾಯಿತು.

ಹಿರಿಯ ಸಾಹಿತಿಗಳಾದ ಪ್ರಭಾಕರ್ ಕಲ್ಲೂರಾಯ ಬನದಗದ್ದೆ, ಹಾ.ಮಾ ಸತೀಶ್ ಬೆಂಗಳೂರು, ಚೈತನ್ಯ ಸೇವಾಶ್ರಮದ ಶ್ರೀ ಶ್ರೀ ಸ್ವಾಮಿ ಯೋಗೇಶ್ವರನಂದ ಸರಸ್ವತಿ, ಲಾಲ್ ಬಹುದ್ದೂರ್ ಶಾಸ್ತ್ರಿ ಕಲಾ ಸಾಂಸ್ಕೃತಿಕ ಸಂಘದ ಗೌರವಾಧ್ಯಕ್ಷ ಎಂ.ವೆಂಕಪ್ಪ ಗೌಡ, ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಮುಖ್ಯ ಕಾರ್ಯನಿರ್ವನಾಧಿಕಾರಿ ಕೆ.ಟಿ ವಿಶ್ವನಾಥ, ನಿವೃತ್ತ ತಾಂತ್ರಿಕ ಕೃಷಿ ಅಧಿಕಾರಿ ಮೋಹನ್ ನಂಗಾರು, ಚಂದನ ಸಾಹಿತ್ಯ ವೇದಿಕೆ ಅಧ್ಯಕ್ಷ ಭೀಮರಾವ್ ವಾಸ್ಟರ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸುಳ್ಯದ ರೋಟರಿ ಶಾಲೆಯಲ್ಲಿ ಕನ್ನಡ ಶಿಕ್ಷಕಿಯಾಗಿರುವ ಶ್ರೀಮತಿ ಚಂದ್ರಕಲಾ ನಂಗಾರುರವರು ನಿವೃತ್ತ ಕೃಷಿ ಅಧಿಕಾರಿ ಮೋಹನ್ ನಂಗಾರುರವರ ಧರ್ಮಪತ್ನಿ.