ಲಿಂಗಪ್ಪ ಗೌಡ ಕುದ್ಪಾಜೆ ನಿಧನ

0

ಐವರ್ನಾಡು ಗ್ರಾಮದ ಕುದ್ಪಾಜೆ ಲಿಂಗಪ್ಪ ಗೌಡರು ನ.29ರಂದು ರಾತ್ರಿ ನಿಧನರಾದರು.
ಅವರಿಗೆ 80 ವರ್ಷ ಪ್ರಾಯವಾಗಿತ್ತು.
ಮೃತರು ಪತ್ನಿ ಶ್ರೀಮತಿ ಪುಷ್ಪಾವತಿ, ಪುತ್ರರಾದ ದೇವಿಪ್ರಸಾದ್ ಕುದ್ಪಾಜೆ ,ವಿನಯ ಕುದ್ಪಾಜೆ, ಬಾಲಚಂದ್ರ ಕುದ್ಪಾಜೆ, ಪುತ್ರಿಯರಾದ ಶ್ರೀಮತಿ ಶಶಿಕಲಾ ನವೀನ,ಶ್ರೀಮತಿ ಪೂರ್ಣಿಮ ಪ್ರಕಾಶ್ ,ಸೊಸೆಯಂದಿರಾದ ಶ್ರೀಮತಿ ಭಾರತಿ ದೇವಿಪ್ರಸಾದ್ ,ಶ್ರೀಮತಿ ಪೂಜಾ ಬಾಲಚಂದ್ರ ಮತ್ತು ಮೊಮ್ಮಕ್ಕಳು ಹಾಗೂ ಕುಟುಂಬಸ್ಥರು ,ಬಂಧುಮಿತ್ರರನ್ನು ಅಗಲಿದ್ದಾರೆ.
ಮೃತರ ಅಂತ್ಯ ಸಂಸ್ಕಾರವು ಇಂದು ಬೆಳಿಗ್ಗೆ ಸುಳ್ಯದ ಕಾಯರ್ತೋಡಿಯ ಕುದ್ಪಾಜೆ ಮನೆಯಲ್ಲಿ ನಡೆಯಲಿದೆ ಎಂದು ಮನೆಯವರು ತಿಳಿಸಿದ್ದಾರೆ.