ಸುಳ್ಯ ಪಿಂಚಣಿದಾರರ ದಿನಾಚರಣೆ ಹಾಗೂ ಕುವೆಂಪು ಜನ್ಮ ದಿನಾಚರಣೆ- ನಿವೃತ್ತ ಹಿರಿಯ 25 ಸದಸ್ಯರಿಗೆ ಗೌರವ ಸನ್ಮಾನ

0

ಸುಳ್ಯ ತಾಲೂಕು ಪಿಂಚಣಿದಾರರ ಮತ್ತು ನಿವೃತ್ತ ನೌಕರರ ಸಂಘದ ವಾರ್ಷಿಕ ಮಹಾಸಭೆ ಹಾಗೂ ಕುವೆಂಪು ಜನ್ಮ ದಿನಾಚರಣೆಯು ಡಿ.30 ರಂದು ಸಂಧ್ಯಾ ರಶ್ಮಿ ಸಭಾಂಗಣದಲ್ಲಿ ನಡೆಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಡಾ | ಎಸ್. ರಂಗಯ್ಯ ರವರು ವಹಿಸಿದ್ದರು.


ನಿವೃತ್ತ ಪ್ರಾಂಶುಪಾಲರು‌ ಕೆ.ವಿ.ದಾಮೋದರ ಗೌಡ, ಭಾರತೀಯ ವಾಯುಪಡೆಯ
ನಿವೃತ್ತ ಯೋಧ ಅಡ್ಡಂತಡ್ಕ ದೇರಣ್ಣ ಗೌಡ,
ನಿವೃತ್ತ ಉಪನ್ಯಾಸಕ ಬಾಬು ಗೌಡ ಅಚ್ರಪ್ಪಾಡಿ, ನಿವೃತ್ತ ಉಪನ್ಯಾಸಕ ಲಯನ್| ರಾಮಚಂದ್ರ ಪಳಂಗಾಯ, ಸಂಘದ ಕೋಶಾಧಿಕಾರಿ ವಿ.ಸುಬ್ರಹ್ಮಣ್ಯ ಹೊಳ್ಳ, ನಿವೃತ್ತ ಉಪನ್ಯಾಸಕ ಅಬ್ದುಲ್ಲ ಅರಂತೋಡು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪಿಂಚಣಿದಾರರ ದಿನಾಚರಣೆಯ ಧ್ಯೇಯ ಹಾಗೂ ಉದ್ದೇಶದ ಕುರಿತು ಬಾಬು ಗೌಡ ಅಚ್ರಪ್ಪಾಡಿ ಯವರು ವಿವರ ನೀಡಿದರು.

ಕನ್ನಡದ ಖ್ಯಾತ ಕವಿ ಕುವೆಂಪು ರವರ ಜನ್ಮ ದಿನಾಚರಣೆ ಅಂಗವಾಗಿ ಸಾಹಿತಿ ಕುತ್ಯಾಳ ನಾಗಪ್ಪ ಗೌಡರು ಹೊರತಂದಿರುವ ವ್ಯಾಸಂಗ ಶಿರ್ಷಿಕೆ ಪುಸ್ತಕ ಬಿಡುಗಡೆ
ಮಾಡಲಾಯಿತು. ಸಾಹಿತಿ ಪೂವಪ್ಪ ಕಣಿಯೂರು ಬಿಡುಗಡಗೊಳಿಸಿ ಕುವೆಂಪುರವರ ಗುಣಗಾನ ಮಾಡಿದರು. ಲೀಲಾ ದಾಮೋದರ್ ಅಧ್ಯಕ್ಷತೆ ವಹಿಸಿದ್ದರು. ಕುಮಾರ ಸ್ವಾಮಿ ತೆಕ್ಕುಂಜ ಉಪನ್ಯಾಸ ನೀಡಿದರು. ಕುತ್ಯಾಳ ನಾಗಪ್ಪ ಗೌಡ, ಚಂದ್ರಶೇಖರ ಪೇರಾಲು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ 75 ವರ್ಷ ವಯೋಮಾನದ ಸಂಘದ 25 ಮಂದಿ ಹಿರಿಯ ಸದಸ್ಯರನ್ನು ಸಂಘದ ವತಿಯಿಂದ ಗೌರವಿಸಲಾಯಿತು.

ಅಗಲಿದ ಸಂಘದ ಸದಸ್ಯರಿಗೆ ಒಂದು ನಿಮಿಷದ ಮೌನ ಪ್ರಾರ್ಥನೆ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಲಾಯಿತು.

ನಿವೃತ್ತ ಉಪನ್ಯಾಸಕ ಕೆ.ಆರ್ .ಗೋಪಾಲಕೃಷ್ಣ ಆಶಯಗೀತೆ ಹಾಡಿದರು. ಸಂಘದ ಕಾರ್ಯದರ್ಶಿ ನಿವೃತ್ತ ಪ್ರಾಂಶುಪಾಲ ಕೆ.ವಿ.ದಾಮೋದರ ರವರು ಪ್ರಾಸ್ತಾವಿಕ ಮಾತಿನೊಂದಿಗೆ ಸ್ವಾಗತಿಸಿದರು. ಕೆ.ವಿ.ದಾಮೋದರ ಗೌಡ,
ನಿವೃತ್ತ ಶಿಕ್ಷಕಿ ಕಮಲಾಕ್ಷಿ ಶೆಟ್ಟಿ, ಸುಬ್ರಹ್ಮಣ್ಯ ಹೊಳ್ಳ ರವರು ಸನ್ಮಾನಿತರ ಪತ್ರ ವಾಚಿಸಿದರು. ಶ್ರೀಮತಿ ಚಂದ್ರಾವತಿ ಬಡ್ಡಡ್ಕ
ವಂದಿಸಿದರು.


ನಿವೃತ್ತ ಉಪನ್ಯಾಸಕ ಅಬ್ದುಲ್ಲಾ ರವರು ಕಾರ್ಯಕ್ರಮ ನಿರೂಪಿಸಿದರು.
ಸಂಘದ ಪದಾಧಿಕಾರಿಗಳು ಸಹಕರಿಸಿದರು.
ಸುಮಾರು 100 ಕ್ಕೂ ಮಿಕ್ಕಿ ಸಂಘದ ಸದಸ್ಯರು ಭಾಗವಹಿಸಿದರು. ಆಗಮಿಸಿದ ಎಲ್ಲರಿಗೂ ಮಧ್ಯಾಹ್ನ ಭೋಜನದ ವ್ಯವಸ್ಥೆ ಮಾಡಲಾಗಿತ್ತು.