ಸುಳ್ಯದಲ್ಲಿ ಅದ್ಧೂರಿಯಾಗಿ ನಡೆದ ಸುಳ್ಯೋತ್ಸವ

0

ನ್ಯೂಸ್ ನಾಟ್ ಔಟ್ ಮತ್ತು ಸುರೇಶ್ ಶೆಟ್ಟಿ ಈವೆಂಟ್ ಮ್ಯಾನೇಜ್ ಮೆಂಟ್ ಆಶ್ರಯದಲ್ಲಿ ಸುಳ್ಯೋತ್ಸವ ಕಾರ್ಯಕ್ರಮ ಜನವರಿ 7 ರಂದು ಅದ್ದೂರಿಯಾಗಿ ನಡೆಯಿತು.

ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ವಠಾರದಲ್ಲಿ ನಡೆದ ಸುಳ್ಯೋತ್ಸವಕ್ಕೆ ಸುಳ್ಯ ಚೆನ್ನಕೇಶವ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರರಾದ ಡಾ.ಹರಪ್ರಸಾದ್ ತುದಿಯಡ್ಕ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.


ವೇದಿಕೆಯಲ್ಲಿ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ, ಚೆನ್ನಕೇಶವ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಸದಸ್ಯೆ ಶ್ರೀಮತಿ ಎಂ.ಮೀನಾಕ್ಷಿ ಗೌಡ, ನ್ಯೂಸ್ ನಾಟ್ ಔಟ್ ಪ್ರಧಾನ ಸಂಪಾದಕ ಹೇಮಂತ್ ಸಂಪಾಜೆ, ಕ್ಯಾಶ್ಯೂ ಫ್ಯಾಕ್ಟರಿ ಮಾಲಕ ಸುಧಾಕರ ಕಾಮತ್ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಬಳಿಕ ವೇದಿಕೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಶ್ರೀ ಶಬರಿ ಚಂಡೆ ವಾದನ ತಂಡದಿಂದ ಆಕರ್ಷಕ ಚಂಡೆ ವಾದನ, ಶ್ರೀಜಿತ್ ಸರಳಾಯರಿಂದ ವಾಯಲಿನ್ ವಾದನ, ಶರಣ್ ಅಯ್ಯಪ್ಪರಿಂದ ಭಕ್ತಿಗೀತೆ, ತೆಯ್ಯಂ ನೃತ್ಯ, ಕಳಿಯಾಟಂ , ಮೋಹಿನಿಯಾಟ್ಟಂ, ಭರತನಾಟ್ಯ, ಆರ್ಯನ್ ಡ್ಯಾನ್ಸ್ ಕಾರ್ಯಕ್ರಮ, ಯಕ್ಷಗಾನ ನೃತ್ಯ ಹಾಗೂ ವಿವಿಧ ಸಂಗೀತಕಾರರಿಂದ ಸಂಗೀತ ಸುಧಾ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾಗಿದ್ದ ಚಿತ್ರನಟಿ ಪಾಯಲ್ ರಾಧಾಕೃಷ್ಣ, ಬಿಗ್ ಬಾಸ್ ಸೀಸನ್ 9 ರ ವಿಜೇತ ಚಿತ್ರನಟ ರೂಪೇಶ್ ಶೆಟ್ಟಿ, ಆರ್ ಜೆ ತ್ರಿಶೂಲ್, ನವೀನ್ ಶೆಟ್ಟಿ ಆರ್ಯನ್ಸ್, ಸಿಂಗರ್ ವೈಷ್ಣವಿ ಕಿಣಿ ಸೇರಿದಂತೆ ವಿವಿಧ ಕಲಾವಿದರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮ ವೀಕ್ಷಣೆಗೆ ಸಾವಿರಾರು ಮಂದಿ ಪ್ರೇಕ್ಷಕರು ಸೇರಿದ್ದರು. ನಿರೂಪಕರಾದ ವಿ ಜೆ ವಿಖ್ಯಾತ್, ಸೌಮ್ಯ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.