ಸುಳ್ಯ ತಾಲೂಕು ಅಟೋ ರಿಕ್ಷಾ ಚಾಲಕರ ಸಂಘಕ್ಕೆ (ಬಿಎಂಎಸ್) ಬೆಳ್ಳಿ ಹಬ್ಬದ ಸಂಭ್ರಮ

0

ಸುಳ್ಯ ಅಟೋ ಚಾಲಕರ ಸಂಘ (ಬಿ.ಎಂ ಎಸ್) ಸುಳ್ಯ ತಾಲೂಕು ಅಟೊ ರಿಕ್ಷಾ ಚಾಲಕರ ಸಂಘವು ಸ್ಥಾಪನೆಯಾಗಿ 25 ವರ್ಷಗಳು ಪೂರೈಸಿದ ಹಿನ್ನಲೆಯಲ್ಲಿ ಜ.26.ರಂದು ಸುಳ್ಯದ ಯುವಜನ ಸಂಯುಕ್ತ ಮಂಡಳಿ , ಜ್ಯೂನಿಯರ್ ಕಾಲೇಜು ಕ್ರೀಡಾಂಗಣದಲ್ಲಿ ಬೆಳ್ಳಿ ಹಬ್ಬ ಸಂಭ್ರಮ ಕಾರ್ಯಕ್ರಮ ನಡೆಯಲಿದೆ.


ತಾಲೂಕಿನ ಎಲ್ಲಾ ರಿಕ್ಷಾ ಚಾಲಕರು ಹಾಗೂ ಈ ಹಿಂದೆ ರಿಕ್ಷಾ ಚಾಲಕರಾಗಿ ಸೇವೆ ಸಲ್ಲಿಸಿ ನಿವೃತರಾದ ಚಾಲಕರುಗಳ ಮಾಹಾ ಸಂಗಮ ನಡೆಯಲಿದೆ ಎಂದು ಸಂಘದ ಅದ್ಯಕ್ಷ ರಾಧಾಕೃಷ್ಣ ಬೈತಡ್ಕ ರವರು ಸುಳ್ಯದ ಪ್ರೆಸ್ ಕ್ಲಬ್ ನಡೆದ ಪತ್ರಿಕಾಗೋಷ್ಠಿ ತಿಳಿಸಿದರು.


1999 ರಲ್ಲಿ ಗೋಪಾಲ ಕೃಷ್ಣ ಭಟ್ ಅಧ್ಯಕ್ಷತೆಯಲ್ಲಿ ಸ್ಥಾಪನೆಗೊಂಡ ಸಂಘವು ಮುಂದೆ ವಿಜಯಕುಮಾರ್ ಉಬರಡ್ಕ ಅದ್ಯಕ್ಷತೆಯಲ್ಲಿ ಸಾಗಿ ಬಂದು ಕಳೆದ 9 ವರ್ಷಗಳಿಂದ ರಾಧಾಕೃಷ್ಣ ಬೈತಡ್ಕರ ಅದ್ಯಕ್ಷತೆಯಲ್ಲಿ ಮುನ್ನಡೆಯುತ್ತಾ ಈ ವರ್ಷ ಬೆಳ್ಳಿ ಹಬ್ಬದ ಸಂಭ್ರಮದಲ್ಲಿದೆ.


ಈಗಾಗಲೇ ರಚಿಸಿಕೊಂಡಿರುವ ತಾಲೂಕಿನ ಸುಬ್ರಹ್ಮಣ್ಯ, ಹರಿಹರ, ಗುತ್ತಿಗಾರು, ಪಂಜ ಕುಕ್ಕುಜಡ್ಕ, ಜಾಲ್ಸೂರು, ಪೆರಾಜೆ , ಕಲ್ಲುಗುಂಡಿ ಘಟಕಗಳ ಸದಸ್ಯರ ಸಹಕಾರದೊಂದಿಗೆ ಜ.26 ರಂದು ಸುಳ್ಯದಲ್ಲಿ ಬೆಳ್ಳಿ ಸಂಭ್ರಮದ ಬೃಹತ್ ಕಾರ್ಯಕ್ರಮ ಸಂಘದ ಅಧ್ಯಕ್ಷ ರಾಧಾಕೃಷ್ಣ ಬೈತಡ್ಕ ಅದ್ಯಕ್ಷತೆಯಲ್ಲಿ ನಡೆಯಲಿದೆ.


ಸಬಾಕಾರ್ಯಕ್ರಮವನ್ನು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಉದ್ಘಾಟಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಮಾಜಿ ಸಚಿವರಾದ ಎಸ್ ಅಂಗಾರ,ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಸುಳ್ಯ ಅಧ್ಯಕ್ಷ ಡಾ ಕೆ .ವಿ ಚಿದಾನಂದ, ಮಣಿಪಾಲ ಮಜ್ದೂರ್ ಯೂನಿಯನ್ ಜನರಲ್ ಸೆಕ್ರೆಟರಿ ಪುರುಷೋತ್ತಮ ಕೆ. ಎನ್, ಸುಳ್ಯ ನ.ಪಂ ಸದಸ್ಯೆ ಕಿಶೋರಿ ಶೇಟ್, ಭಾರತೀಯ ಮಜ್ದೂರ್ ಸಂಘದ ಜಿಲ್ಲಾ ಅಧ್ಯಕ್ಷ ಅನಿಲ್ ಕುಮಾರ್ ಯು, ಸುಳ್ಯ ತಾಲೋಕು ಅಟೋ ರಿಕ್ಷಾ ಚಾಲಕರ ಸಂಘದ ಸ್ಥಾಪಕಾದ್ಯಕ್ಷ ಗೋಪಾಲಕೃಷ್ಣ ಭಟ್, ಸುಳ್ಯ ವೃತ್ತ ನಿರೀಕ್ಷಕ ಮೋಹನ್ ಕೊಠಾರಿ, ರಿಕ್ಷಾ ಚಾಲಕರ ಸಂಘದ ಕಾನೂನು ಸಲಹೆಗಾರ ಭಾಸ್ಕರ್ ರಾವ್, ರಿಕ್ಷಾ ಚಾಲಕರ ಸಂಘದ ಮಾಜೀ ಅದ್ಯಕ್ಷ ವಿಜಯಕುಮಾರ್ ಉಬರಡ್ಕ ಭಾಗವಹಿಸಲಿದ್ದಾರೆ.ಭ್ರಾಮರಿ ನಾಟ್ಯಾಲಯ ಕುಕ್ಕುಜಡ್ಕ , ವಿದುಷಿ ಜಯಶ್ರೀ ಕುಳ್ಳಂಪಾಡಿ ಮತ್ತು ಸಾಂಸ್ಕೃತಿಕ ವೈಭವ , ಯೋಗ, ಹಾಸ್ಯ, ಡ್ಯಾನ್ಸ್ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.

ಸುದ್ದಿಗೋಸ್ಟಿಯಲ್ಲಿ ಅಟೋ ರಿಕ್ಷಾ ಚಾಲಕರ ಸಂಘದ ಸ್ಥಾಪಕ ಅಧ್ಯಕ್ಷ ಗೋಪಾಲಕೃಷ್ಣ ಭಟ್, ಅಟೋ ರಿಕ್ಷಾ ಚಾಲಕರ ಸಂಘದ ಮಾಜೀ ಅಧ್ಯಕ್ಷ ವಿಜಯಕುಮಾರ್ ಉಬರಡ್ಕ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಮರ್ಕಂಜ,ಉಪಕಾರ್ಯದರ್ಶಿ ಸುರೇಂದ್ರ ಕಾಮತ್, ಕೋಶಾಧಿಕಾರಿ ನಿತ್ಯಾನಂದ, , ಮನೋಹರ್ ಚೊಕ್ಕಾಡಿ, ಮೋಹನ್ ಚೊಕ್ಕಾಡಿ,ಸಂಗಪ್ಪ, ಸುದಾಕರ್ ನಾಯಕ್, ಮೊದಲಾದವರು ಉಪಸ್ಥಿತರಿದ್ದರು.