ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ, ಕಲ್ಮಕಾರು ಇಲ್ಲಿ 75ನೇ ಗಣರಾಜ್ಯೋತ್ಸವ ಆಚರಿಸಲಾಯಿತು. ಸೋಮಶೇಖರ ಬಿಳಿಮಲೆಯವರು ಧ್ವಜಾರೋಹಣ ಮಾಡಿದರು.
ಬಳಿಕ ಸಭಾ ಕಾರ್ಯಕ್ರಮ ನಡೆದಿದ್ದು ದತ್ತಿನಿದಿ ಪೋಷಕರಾದ ಉಮೇಶ್ ಬಿಳಿಮಲೆ, ಕೊಲ್ಲಮೊಗ್ರು ಗ್ರಾ. ಪಂ. ಉಪಾಧ್ಯಕ್ಷರಾದ ಅಶ್ವತ್ ವೈಪಿ, ಧರ್ಮರಾಜ ಕೆ ಪಿ, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಶಿವಾನಂದ ಬಿಳಿಮಲೆ, ಶ್ರೀಮತಿ ದಿವ್ಯ ಕುಶಾಲಪ್ಪ ಹಾಗೂ ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರು, ಪೋಷಕರು ಉಪಸ್ಥಿತರಿದ್ದರು, ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ಮಾಲಿನಿ ಕೆ ಎಸ್ ಸ್ವಾಗತಿಸಿದರು, ಶ್ರೀಮತಿ ಸುಕನ್ಯಾ ಬಿ.ಡಿ ಧನ್ಯವಾದ ಸಲ್ಲಿಸಿದರು. ಚಿರಶ್ರೀ ಕಾರ್ಯಕ್ರಮ ನಿರೂಪಣೆ ಮಾಡಿದರು. ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ನಡೆಸಲಾಯಿತು, ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು, ಶಿಕ್ಷಕರಾದ ಶ್ರೀಮತಿ ದೀಪಾ ಹಾಗೂ ಗೌರವ ಶಿಕ್ಷಕಿ ಜ್ಯೋತಿ ಎಂ ಆರ್ ಸಹಕರಿಸಿದರು.