ಬಳ್ಪ: ದೊಡ್ಡಮನೆ ಕುಟುಂಬದ ಶ್ರೀ ಧರ್ಮದೈವ ಮತ್ತು ಪರಿವಾರ ದೈವಗಳ ನೇಮೋತ್ಸವ

0

ಬಳ್ಪ ಗ್ರಾಮದ ದೊಡ್ಡಮನೆ ಮನೆಯ ಕುಟುಂಬದ ಶ್ರೀ ಧರ್ಮದೈವ ಮತ್ತು ಪರಿವಾರ ದೈವಗಳ ನೇಮೋತ್ಸವ ಜ.25 ಮತ್ತು ಜ.26 ರಂದು ವರೆಗೆ ನಡೆಯಿತು. ಜ.25 ರಂದು ಬೆಳಿಗ್ಗೆ ಶ್ರೀ ಮಹಾಗಣಪತಿ ಹೋಮ, ಶ್ರೀ ವೆಂಕಟ್ರಮಣ ದೇವರ ಹರಿಸೇವೆ, ಮಧ್ಯಾಹ್ನ ಅನ್ನಸಂತರ್ಪಣೆ, ನಂತರ ಶ್ರೀ ದೈವಗಳ ಭಂಡಾರ ತೆಗೆಯುವುದು ನಂತರ ಅನ್ನಸಂತರ್ಪಣೆ, ರಾತ್ರಿ ಪರಿವಾರ ದೈವಗಳ ನೇಮೋತ್ಸವ, ಜ.26 ರಂದು ಬೆಳಿಗ್ಗೆ ಪಿಲಿಭೂತ, ಶಿರಾಡಿ ದೈವ ಹಾಗೂ ಧರ್ಮದೈವ ಶ್ರೀ ರುದ್ರಚಾಮುಂಡಿಗೆ ನೇಮೋತ್ಸವ ನಂತರ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.