ಇಂದು ಮುಳ್ಯ-ಅಟ್ಲೂರಿನಲ್ಲಿ ಶ್ರೀ ದೇವಿ ಮಹಾತ್ಮೆ ಯಕ್ಷಗಾನ

0

ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇವರಿಂದ 30ನೇ ವರ್ಷದ ಸೇವೆಯಾಟ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಫೆ.27ರಂದು ಅಜ್ಜಾವರ ಗ್ರಾಮದ ಮುಳ್ಯ – ಅಟ್ಲೂರು ಗಣೇಶನಗರದ ಶ್ರೀ ಮಹಾಗಣಪತಿ ಭಜನಾ ಮಂದಿರದ ವಠಾರದಲ್ಲಿ ನಡೆಯುವುದು, ಸಂಜೆ ಚೌಕಿಯಲ್ಲಿ ಪೂಜೆ ನಡೆಯುವುದು, ಬಳಿಕ ಸಂಜೆ 6 ಗಂಟೆಯಿಂದ 12.30ರವರೆಗೆ ಕಾಲಮಿತಿಯಲ್ಲಿ ಯಕ್ಷಗಾನ ನಡೆಯುವುದು. ರಾತ್ರಿ 8.30ಕ್ಕೆ ಅನ್ನಸಂತರ್ಪಣೆ ನಡೆಯುವುದು.