














ಶ್ರೀ ಸದಾಶಿವ ಚಾರಿಟಬಲ್ ಸೊಸೈಟಿ ಬೆಳ್ಳಾರೆ ಇದರ ಆಶ್ರಯದಲ್ಲಿರು ಶ್ರೀ ಸದಾಶಿವ ಶಿಶು ಮಂದಿರದ 15ನೇ ವರ್ಷಾಚರಣೆಯ ಅಂಗವಾಗಿ ಚಿಣ್ಣರ ಹಬ್ಬ-2024 ಎ. 29ರಂದು ಬೆಳ್ಳಾರೆಯ ಅಜಪಿಲ ಶ್ರೀ ಮಹಾಲಿಂಗೇಶ್ವರ ಸಭಾಭವನದಲ್ಲಿ ನಡೆಯಲಿದೆ.
ಸಂಜೆ 4.30ಕ್ಕೆ ದೀಪ ಪ್ರಜ್ವಲನೆಯ ಬಳಿಕ ಸಂಸ್ಥೆಯ ಪುಟಾಣಿಗಳಿಂದ, ಹಿರಿಯ ವಿದ್ಯಾರ್ಥಿಗಳಿಂದ, ಮಾತೃಮಂಡಳಿಯವರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಸಂಜೆ 6.00 ಗಂಟೆಯಿಂದ ಶ್ರೀ ಸದಾಶಿವ ಚಾರಿಟಬಲ್ ಸೊಸೈಟಿ ಅಧ್ಯಕ್ಷ ಬಿ. ಸುಬ್ರಹ್ಮಣ್ಯ ಜೋಶಿಯವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಉಪನ್ಯಾಸಕ ರಾಮಪ್ರಸಾದ ಕಾಂಚೋಡು ಮತ್ತು ಸುಭಾಶ್ಚಂದ್ರ ಕಳಂಜ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ. ಅನೇಕ ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.









