ಎಸ್ಸೆಸ್ಸೆಫ್ ಕಲ್ಲುಗುಂಡಿ ಕ್ಯಾಂಪಸ್ ಯೂನಿಟ್ ವತಿಯಿಂದ ಮಾದಕ ದ್ರವ್ಯಗಳ ವಿರುದ್ಧ ಜಾಗೃತಿ ಅಭಿಯಾನ; ಕಾಲ್ನಡಿಗೆ ಜಾಥಾ, ಭಿತ್ತಿಪತ್ರ ಪ್ರದರ್ಶನ ಮತ್ತು ಬೀದಿ ಭಾಷಣ

0

ಆಗಸ್ಟ್ 24, 25 ರಂದು ಮೈಸೂರಿನಲ್ಲಿ ನಡೆಯಲಿರುವ ಕ್ಯಾಂಪಸ್ ಕಾನ್ಫರೆನ್ಸ್ ನ ಪೂರ್ವವಾಗಿ ನಡೆಯುವ ವಿವಿಧ ಕಾರ್ಯಕ್ರಮಗಳಲ್ಲಿ ಒಂದಾದ ಮಾದಕ ದ್ರವ್ಯಗಳ ವಿರುದ್ಧ ಜಾಗೃತಿ ಅಭಿಯಾನ; ಕಾಲ್ನಡಿಗೆ ಜಾಥಾ, ಭಿತ್ತಿಪತ್ರ ಪ್ರದರ್ಶನ ಮತ್ತು ಬೀದಿ ಭಾಷಣ ಕಾರ್ಯಕ್ರಮವು ಎಸ್ಸೆಸ್ಸೆಫ್ ಕಲ್ಲುಗುಂಡಿ ಕ್ಯಾಂಪಸ್ ಯೂನಿಟ್ ವತಿಯಿಂದ ಜೂನ್ 29ರಂದು ಕಲ್ಲುಗುಂಡಿಯಲ್ಲಿ ನಡೆಯಿತು.

ಭಿತ್ತಿಪತ್ರ ಹಾಗೂ ಭಾಷಣದ ಮೂಲಕ ಮಾದಕ ದ್ರವ್ಯಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳನ್ನು ಸಮಾಜಕ್ಕೆ ತಿಳಿಸಿ ಕೊಡಲಾಯಿತು. ಕೊಯನಾಡು ವಿದ್ಯಾರ್ಥಿಗಳು ಸಹಿತ ಎಸ್ಸೆಸ್ಸೆಫ್ ಕಲ್ಲುಗುಂಡಿ ಮತ್ತು ಗೂನಡ್ಕ ಯೂನಿಟ್ ವ್ಯಾಪ್ತಿಯ ಹೆಚ್ಚಿನ ವಿದ್ಯಾರ್ಥಿಗಳು ಭಾಗವಹಿಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಸಂಪಾಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಎಸ್ ಕೆ ಹನೀಫ್ ಮಾತನಾಡಿ ಮಾದಕ ದ್ರವ್ಯ ಮುಕ್ತ ಸಮಾಜ ನಿರ್ಮಾಣಕ್ಕೆ ನಾವೆಲ್ಲರೂ ಕೈಜೋಡಿಸೋಣ ಎಂದು ಕರೆ ನೀಡಿದರು. ಎಸ್ಸೆಸ್ಸೆಫ್ ಸುಳ್ಯ ಸೆಕ್ಟರ್ ಮಾಜಿ ಕೋಶಾಧಿಕಾರಿ ಉನೈಸ್ ಪಿ ಯು, ಎಸ್ ವೈ ಎಸ್ ಕಲ್ಲುಗುಂಡಿ ಕಾರ್ಯದರ್ಶಿ ಫೈಝಲ್ ಝುಹ್ರಿ, ಎಸ್ ವೈ ಎಸ್ ಗೂನಡ್ಕ ಸದಸ್ಯರಾದ ಇಬ್ರಾಹಿಂ, ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಕ್ಯಾಂಪಸ್ ಕಾರ್ಯದರ್ಶಿ ಸ್ವಾದಿಕ್ ಹಾಗೂ ಎಸ್ಸೆಸ್ಸೆಫ್ ಕಲ್ಲುಗುಂಡಿ ಶಾಖೆ ಪ್ರಧಾನ ಕಾರ್ಯದರ್ಶಿ ರುನೈಝ್, ಕ್ಯಾಂಪಸ್ ಕಾರ್ಯದರ್ಶಿ ಅರ್ಫಾಝ್ ಉಪಸ್ಥಿತರಿದ್ದರು.