ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದ ಗ್ರಾ.ಪಂ.ಸದಸ್ಯ
ಪೆರುವಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಗ್ರಾಮದ ಸಂಪೂರ್ಣ ಮನೆ ನಂಬ್ರ ಬದಲಾವಣೆಯಾಗಿದ್ದು ಆಧಾರ್/ ಪಡಿತರ ಚೀಟಿ ಹಾಗೂ ಇನ್ನಿತರ ದಾಖಲೆಗೆ ಜನರಿಗೆ ತೊಂದರೆಯಾಗಿದೆ.
ಈ ಹಿಂದೆ ಬೆಳ್ಳಾರೆ ಪಂಚಾಯತ್ ಜೊತೆ ಪೆರುವಾಜೆ ಇದ್ದಾಗ ಪೆರುವಾಜೆ ವಾರ್ಡ್ 1, ಮುರ್ಕೆತ್ತಿ 2, ಮುಕ್ಕೂರು 3 ಆಗಿತ್ತು.
2015 ರಲ್ಲಿ ವಾರ್ಡ್ ನಂಬರ್ ಬದಲಾವಣೆಯಾಗಿದ್ದು ಈಗ ಜನರಿಗೆ ತೊಂದರೆಯಾಗಿದೆ.
ಈ ಬಗ್ಗೆ ಗ್ರಾಮ ಪಂಚಾಯತ್ ಸದಸ್ಯ ಸಚಿನ್ ರಾಜ್ ಶೆಟ್ಟಿಯವರು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನೆ ನಂಬ್ರ ಬದಲಾವಣೆ ಪ್ರಕ್ರಿಯೆ ಸ್ಥಗಿತಗೊಳಿಸುವಂತೆ ಮನವಿ ನೀಡಿದ್ದಾರೆ.
ಮನೆ ನಂಬ್ರ ಬದಲಾವಣೆಯಿಂದ ಆಧಾರ್/ ಪಡಿತರ ಚೀಟಿ ಯಲ್ಲಿ ಬದಲಾವಣೆ ಮಾಡಲು ಗ್ರಾಮದ ಜನತೆಗೆ ತೊಂದರೆ ಆಗಲಿದೆ ಎಂದು ತಿಳಿದು ಬಂದಿದೆ.