ಪಂಜ: ಪುತ್ಯ ಬಸ್ ತಂಗುದಾಣಕ್ಕೆ ಅಳವಡಿಸಿದ ಸ್ಟೀಲ್ ಪೈಪ್ ಗಳಿಗೆ ಹಾನಿಕಿಡಿಗೇಡಿಗಳ ಕೃತ್ಯವೋ-ಕಳ್ಳತನಕ್ಕೆ ಯತ್ನವೋ?

0

ಪಂಜ ಗ್ರಾಮ ಪಂಚಾಯತ್ ವತಿಯಿಂದ ನಿರ್ಮಾಣ ಗೊಂಡಿರುವ ಪುತ್ಯ ಬಸ್ ತಂಗುದಾಣದಲ್ಲಿ ಅಳವಡಿಸಿರುವ ಮೂರು ಸ್ಟೀಲ್ ಪೈಪ್ ಒಡೆದು ತೆಗೆದ ರೀತಿಯಲ್ಲಿ ಆಲ್ಲೇ ಪತ್ತೆಯಾಗಿದೆ.

ಘಟನೆ ಜು.4 ರಂದು ನಡೆದಿದೆ. ಇದು‌ ಕಿಡಿ ಗೇಡಿಗಳ ಕೃತ್ಯವೋ ಅಥವಾ ಕಳ್ಳತನ ನಡೆಸಲು ಯತ್ನಿಸಿದ ವೇಳೆ ವಾಹನ ಬಂತೆಂದು ಕಳ್ಳರು ಪರಾರಿಯಾಗಿರುವ ಸಾಧ್ಯತೆ ಇದೆ. ತನಿಖೆ ಬಳಿಕವಷ್ಟೆ ನಿಜ ವಿಷಯ ತಿಳಿಯಬೇಕಾಗಿದೆ.