ಶಾಲು ಹೊದಿಸಿ ಮಗನನ್ನು ಗೌರವಿಸಿದ ಶಯೀದ್ ರವರ ತಾಯಿ ಆಯಿಷಾ ಅಜ್ಜುಮ್ಮ
ಸುಳ್ಯದ ಬಂಟರ ಭವನದಲ್ಲಿ ಜು 6 ರಂದು ನಡೆದ ಸಾಮಾಜಿಕ ಧುರೀಣ ಟಿ.ಎಂ. ಶಹೀದ್ ತೆಕ್ಕಿಲ್ ರವರ ಸಾರ್ವಜನಿಕ ಸನ್ಮಾನ ಕಾರ್ಯಕ್ರಮದಲ್ಲಿ ಸುಮಾರು 40 ಕ್ಕೂ ಹೆಚ್ಚು ಸಂಘ ಸಂಸ್ಥೆಗಳಿಂದ ಸನ್ಮಾನ ಕಾರ್ಯಕ್ರಮ ನಡೆಯಿತು.
ವಿಶೇಷವಾಗಿ ಈ ಕಾರ್ಯಕ್ರಮದಲ್ಲಿ ತೆಕ್ಕಿಲ್ ಕುಟುಂಬದ ವತಿಯಿಂದಲೂ ಅವರನ್ನು ಗೌರವಿಸಲಾಯಿತು.
ಈ ವೇಳೆ ಟಿ. ಎಂ ಶಹೀದ್ ರವರ ತಾಯಿ ಆಯಿಷಾ ಅಜ್ಜುಮ್ಮ ರವರು ಕುಟುಂಬದ ಪರವಾಗಿ ಮಗನಿಗೆ ಶಾಲು ಹೊದಿಸಿ ಸನ್ಮಾನಿಸಿ ಖುಷಿ ಪಟ್ಟರು.