ಬೊಳುಬೈಲುನ ಪೀಸ್ ಸ್ಕೂಲ್‌ನಲ್ಲಿ ಡಿ.1 ಮತ್ತು 3 ರಂದು ಶಾಲಾ ವಿದ್ಯಾರ್ಥಿಗಳ ಸಾಂಸ್ಕೃತಿಕ ಹಬ್ಬ ಹಾಗೂ ಫುಡ್ ಫೇರ್ (ಆಹಾರ ಮೇಳ) ನಡೆಯಿತು.















ʻಫನೂನ್ 2025ʼ ಎಂಬ ಶೀರ್ಷಿಕೆಯಡಿಯಲ್ಲಿ ನಡೆದ ಈ ಸಾಂಸ್ಕೃತಿಕ ಹಬ್ಬವು ಡಿ.1ರಂದು ವಿವಿಧ ವೈಯಕ್ತಿಕ ವೇದಿಕೆ ಸ್ಪರ್ಧೆಗಳ ಮೂಲಕ ಆರಂಭಗೊಂಡು ಡಿ.2ರಂದು ಗುಂಪು ವೇದಿಕೆ ಸ್ಪರ್ಧೆಗಳ ಮೂಲಕ ಗಮನ ಸೆಳೆಯಿತು. ನಾಲ್ಕು ಶಾಲಾ ಹೌಸ್‌ಗಳ ಮಧ್ಯೆ ನಡೆದ ಈ ಸ್ಪರ್ಧೆಗಳಲ್ಲಿ ಎಲ್ಲಾ ವಿದ್ಯಾರ್ಥಿಗಳು ಉತ್ಸಾಹ ಹಾಗೂ ಸ್ಪರ್ಧಾ ಮನೋಭಾವದೊಂದಿಗೆ ಪಾಲ್ಗೊಂಡರು. ಕಿರಾತ್, ಹದೀಸ್, ತಫಸೀರ್, ಇಸ್ಲಾಮೀ ಗೀತೆಗಳು, ಅರೇಬಿಕ್ ಪದ್ಯಗಳು, ಡಿಬೇಟ್, ವಾರ್ತಾ ಪ್ರಸ್ತುತ ಹಾಗೂ ಭಾಷಣಾ ಮುಂತಾದ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಭಾಗಿಯಾದರು.
ಡಿ. 3ರಂದು ʻಪ್ಲೇವರ್ ಫೀಸ್ಟಾʼ ಎಂಬ ಹೆಸರಿನಲ್ಲಿ ಆಹಾರ ಮೇಳವು ವಿದ್ಯಾರ್ಥಿಗಳಿಂದ ಆಯೋಜಿಸಲ್ಲಪಟ್ಟಿತು. ವಿದ್ಯಾರ್ಥಿಗಳು ಮನೆಯಲ್ಲಿ ತಯಾರಿಸಿದ ವಿಶಿಷ್ಟ, ವೈವಿದ್ಯಮಯ ಹಾಗೂ ರುಚಿಕರವಾದ ಅಹಾರ ಪದಾರ್ಥಗಳನ್ನು ಮಾರಾಟ ಮಾಡಿದರು. ಈ ಆಹಾರ ಮೇಳವು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ನಾಲ್ಕು ಶಾಲಾ ಹೌಸ್‌ಗಳ ಮಧ್ಯೆ ಸ್ಪರ್ಧಾ ರೀತಿಯಲ್ಲಿ ಆಯೋಜನೆಗೊಂಡ ಈ ಆಹಾರ ಮೇಳದಲ್ಲಿ ಸುಳ್ಯದಲ್ಲಿ ನೂತನವಾಗಿ ಆರಂಭಗೊಂಡಿರುವ ಡಿಲೈಟ್ಸ್ ಕೆಫೆಯ ಮಸೂದ್ ಹಾಗೂ ಅನ್ಸಾರ್ ತೀರ್ಪುಗಾರರಾಗಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಚಾಲಕರಾದ ಕೆ. ಅಬೂಬಕರ್, ಉದ್ಯಮಿ ಅಬ್ದುರ್ರಹ್ಮಾನ್ ಪಿ.ಎಚ್., ಶಾಫಿ ಬೊಳುಬೈಲು, ಸಂಸ್ಥೆಯ ಉಪ ಸಂಚಾಲಕ ಸಂಶುದ್ದೀನ್ ಹಾಗೂ ಟ್ರಸ್ಟಿಗಳಾದ ಫರೀದಾ ಬಾನು, ಹನೀಫ್, ಸಯಾದ್, ಮುನೀರ್ ಮುಂತಾದವರು ಭಾಗವಹಿಸಿದ್ದರು. ಸಂಸ್ಥೆಯ ಪ್ರಾಂಶುಪಾಲರಾದ ಮುಹಮ್ಮದ್ ಸೈಫುಲ್ಲಾ, ಅರೇಬಿಕ್ ಶಿಕ್ಷಕ ಹಸೈನಾರ್ ಸ್ವಲಾಹಿ, ಕಾರ್ಯಕ್ರಮದ ಸಂಚಾಲಕ ಮುಮ್ತಾಝ್ ಹಾಗೂ ಸಹ ಶಿಕ್ಷಕರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಸಂಘಟಿಸಿದರು.










