ಆಲೆಟ್ಟಿ ಪಂಚಾಯತ್ ವ್ಯಾಪ್ತಿಯ ನಾರ್ಕೋಡಿನಲ್ಲಿರುವ ಕಟ್ಟಡವೊಂದರಲ್ಲಿ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ಬೆಳಗ್ಗೆ ವರದಿಯಾಗಿದೆ.















ಆತ್ಮ ಹತ್ಯೆ ಮಾಡಿಕೊಂಡ ಯುವಕ ಶೇಖಪಟ್ಟಿ ನಿವಾಸಿ ದಿ. ಕೃಷ್ಣ ಬೆಳ್ಚಪ್ಪಾಡ ರವರ ಪುತ್ರ ರಾಜೇಶ್ ಶೇಖಪಟ್ಟಿ ಎಂದು ತಿಳಿದು ಬಂದಿದೆ.
ಕೆಲ ವರ್ಷದ ಹಿಂದೆ ಮಂಗಳ ಬಾರ್ ಮತ್ತು ರೆಸ್ಟೋರೆಂಟ್ ನಲ್ಲಿ ಕೆಲಸ ಮಾಡುತ್ತಿದ್ದ ಯುವಕ ಬಾರ್ ಬಂದ್ ಆದ ನಂತರ ಅದೇ ಕಟ್ಟಡದಲ್ಲಿ ವಾಸವಾಗಿದ್ದು ಕಳೆದ ತಡ ರಾತ್ರಿ ರೂಮಿನಲ್ಲಿ ಬಟ್ಟೆಯನ್ನು ಕುತ್ತಿಗೆಗೆ ಬಿಗಿದು ಪಕ್ಕಾಸಿಗೆ ಹಾಕಿಕೊಂಡು ಆತ್ಮ ಹತ್ಯೆ ಮಾಡಿಕೊಂಡಿದ್ದಾನೆ. ಮೃತಪಟ್ಟ ಯುವಕ ಸಹೋದರ ಉಮೇಶ್, ಅನಿಲ್, ಸಹೋದರಿ ಶ್ರೀಮತಿ ರಮ್ಯ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ. ಯುವಕ ಅವಿವಾಹಿತನಾಗಿದ್ದು ಸ್ಥಳೀಯವಾಗಿ ಉತ್ತಮ ಕ್ರಿಕೆಟ್ ಆಟಗಾರನಾಗಿ ಗುರುತಿಸಿಕೊಂಡಿದ್ದರು.
ಸ್ಥಳಕ್ಕೆ ಸುಳ್ಯ ಪೊಲೀಸರು ಆಗಮಿಸಿ ಮಹಜರು ನಡೆಸಿ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.










