ಯುವಜನ ಸಂಯುಕ್ತ ಮಂಡಳಿ ಸುಳ್ಯ ಹಾಗೂ ಮಯೂರಿ ಯುವತಿ ಮಂಡಲ ಚೊಕ್ಕಾಡಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆಯುತ್ತಿರುವ ಪಂಚ ಸಪ್ತತಿ ಸ್ವಚ್ಛತಾ ಅಭಿಯಾನ – 2025 ಕಾರ್ಯಕ್ರಮದ ಅಂಗವಾಗಿ ಡಿ.02 ರಂದು ಅಕ್ಕೋಜಿಪಾಲ್ ಬಸ್ಸು ತಂಗುದಾಣದಲ್ಲಿ ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳಲಾಯಿತು. ತಂಗುದಾಣವನ್ನು ಶುಚಿಗೊಳಿಸಿ, ಸುತ್ತಮುತ್ತಲಿನ ಪ್ರದೇಶದಲ್ಲಿದ್ದ ಕಸವನ್ನು ಸ್ವಚ್ಚತೆ ಮಾಡಲಾಯಿತು.















ಈ ಸ್ವಚ್ಛತಾ ಕಾರ್ಯಕ್ರಮದಲ್ಲಿ ಯುವತಿ ಮಂಡಲದ ಅಧ್ಯಕ್ಷೆ ಹೇಮಾವತಿ ತಂಟೆಪ್ಪಾಡಿ, ಕಾರ್ಯದರ್ಶಿ ಗೀತಾ ಕೊರತ್ಯಡ್ಕ, ಪದಾಧಿಕಾರಿಗಳು ಹಾಗೂ ಸದಸ್ಯೆಯರು ಉಪಸ್ಥಿತರಿದ್ದರು.










