Home ಪ್ರಚಲಿತ ಸುದ್ದಿ ಹವಾಮಾನ ಆಧಾರಿತ ಬೆಳೆ ವಿಮೆ ಹಣ ಕೃಷಿಕರ ಖಾತೆಗೆ ಪಾವತಿಸಿ

ಹವಾಮಾನ ಆಧಾರಿತ ಬೆಳೆ ವಿಮೆ ಹಣ ಕೃಷಿಕರ ಖಾತೆಗೆ ಪಾವತಿಸಿ

0

ಭಾರತೀಯ ಕಿಸಾನ್ ಸಂಘದಿಂದ ಮನವಿ

2024-25 ನೇ ಸಾಲಿನ ಹವಾಮಾನ ಆಧಾರಿತ ಬೆಳೆ ವಿಮೆ ವಿಳಂಬವಾಗಿದ್ದು ಕೃಷಿಕರ ಖಾತೆಗೆ ತಕ್ಷಣ ಹಣ ಜಮಾ ಮಾಡಬೇಕೆಂದು ಭಾರತೀಯ ಕಿಸಾನ್ ಸಂಘ ಸುಳ್ಯ ಘಟಕದ ವತಿಯಿಂದ ತಹಶೀಲ್ದಾರ್ ಮೂಲಕ ಡಿ.8ರಂದು ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.

ಕರಾವಳಿಯ ಜನರು ಬಹುಪಾಲು ಕೃಷಿಯನ್ನು ಅವಲಂಬಿಸಿದ್ದಾರೆ. ಅಡಿಕೆ, ತೆಂಗು, ಕಾಳು‌ಮೆಣಸು ಇತ್ಯಾದಿ ಈ ಭಾಗದಲ್ಲಿ ಹೆಚ್ಚಾಗಿ‌ ಬೆಳೆಯುತ್ತಿದ್ದು ಕಳೆದ ಕೆಲವು ವರ್ಷದಿಂದ ಅಡಿಕೆಗೆ ಎಲೆ ಚುಕ್ಕೆ, ಹಳದಿ ಎಲೆ ರೋಗದಿಂದ ಫಸಲು ನಷ್ಟವುಂಟಾಗಿದ್ದು ಕೃಷಿಕರು ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ. 2024-25 ನೇ ಸಾಲಿನ ಹವಾಮಾನ ಆಧಾರಿತ ‌ಬೆಳೆ ವಿಮೆ ವಿಳಂಬಗೊಂಡಿದ್ದು ಈ ಸಾಲಿನ ಹವಾಮಾನಕ್ಕೆ ಅನುಗುಣವಾಗಿ ಕೃಷಿಕರಿಗೆ ವಿಮಾ ಪರಿಹಾರ ತಕ್ಷಣ ನೀಡಿ ಕೃಷಿಕರಿಗೆ ಅನುಕೂಲ ಮಾಡಿಕೊಡುವಂತೆ ಸರಕಾರಕ್ಕೆ ಸಲ್ಲಿಸಿದ ಮನವಿಯಲ್ಲಿ ತಿಳಿಸಿದ್ದಾರೆ.

ಈ ಸಂದರ್ಭ ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ಮೋಹನ್ ರಾಂ ಸುಳ್ಳಿ, ಕುಸುಮಾಧರ ಎ.ಟಿ., ಹೇಮಂತ್ ಕಂದಡ್ಕ, ಚಂದ್ರಶೇಖರ ನಡುಮನೆ, ಅವಿನಾಶ್ ಕುರುಂಜಿ, ಜಗನ್ನಾಥ ಜಯನಗರ ಇದ್ದರು.

NO COMMENTS

error: Content is protected !!
Breaking