ಮತಗಳ್ಳತನದ ವಿರುದ್ಧ ಸಂಪಾಜೆಯಲ್ಲಿ ಕಾಂಗ್ರೆಸ್ ಜನಜಾಗೃತಿ ಜಾಥ

0

ಸಹಕಾರ ರತ್ನ ಪಿ.ಸಿ. ಜಯರಾಮರಿಗೆ ಸನ್ಮಾನ

ಮತಗಳ್ಳತನದ ವಿರುದ್ಧ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಂಪಾಜೆ ವಲಯ ಕಾಂಗ್ರೆಸ್‌ ನೇತೃತ್ವದಲ್ಲಿ ಜಾಗೃತಿ ಜಾಥಾ ಡಿ.7ರಂದು ಸಂಪಾಜೆಯಲ್ಲಿ ನಡೆಯಿತು.

ಸಂಜೆ ಸಂಪಾಜೆ ಕೂಲಿಶೆಡ್‌ ಬಳಿಯಿಂದ ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಭಾಭವನದವರೆಗೆ ಕಾಂಗ್ರೆಸ್ ಕಾರ್ಯಕರ್ತರಿಂದ ಮತಗಳ್ಳತನದ ವಿರುದ್ಧ ಘೋಷಣೆ ಕೂಗುತ್ತಾ ಜಾಗೃತಿ‌ಜಾಥಾ ನಡೆಯಿತು. ಜಾಥಾ ಸಂಪಾಜೆ ಸಹಕಾರಿ ದಂಘದ ವಠಾರಕ್ಕೆ ತಲುಪಿದ ಮೇಲೆ, ಸಹಕಾರ ಸಂಘದ ಸಭಾಂಗಣದಲ್ಲಿ ಸಭಾ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಪಾಜೆ ವಲಯ ಕಾಂಗ್ರೆಸ್‌ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ ವಹಿಸಿದರು. ಮುಖ್ಯ ಭಾಷಣಗಾರರಾಗಿ ಗ್ಯಾರಂಟಿ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷ ಭರತ್‌ ಮುಂಡೋಡಿ ಆಗಮಿಸಿದರು. 2025 ನೇ ಸಾಲಿನ ರಾಜ್ಯ ಮಟ್ಟದ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ. ಜಯರಾಮರನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳು ರಾಜ್ಯ ಕಾರ್ಮಿಕ ಮಂಡಳಿ ಸದಸ್ಯ ಕೆ.ಪಿ. ಜಾನಿ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ.ಎಸ್. ಗಂಗಾಧರ, ತಾಲೂಕು ಎಸ್ಸಿ ಬ್ಲಾಕ್ ಘಟಕದ ಅಧ್ಯಕ್ಷ ಮಹೇಶ್‌ ಬೆಳ್ಳಾರ್ಕರ್‌, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಮಹಮ್ಮದ್‌ ಕುಂಞಿ ಗೂನಡ್ಕ, ಪ್ರಮುಖರಾದ ಇಬ್ರಾಹಿಂ ಎ.ಕೆ., ಪ್ರಮೀಳಾ ಪೆಲ್ತಡ್ಕ, ಯಮುನಾ ಬಿ.ಎಸ್.‌, ಲಲನ ಕೆ.ಆರ್.‌, ಲೂಕಸ್‌ ಟಿ.ಐ., ಸಾಜಿತ್ ಐ.ಜಿ., ರವಿ ದೊಡ್ಡಡ್ಕ, ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ವಿವಿಧ ಪಕ್ಷಗಳ ಕಾರ್ಯಕರ್ತರಾದ ಸಾಜಿತ್‌ ಐ.ಜಿ., ಮಪ್ಸಾನ್‌ ಗೂನಡ್ಕ, ಸುಹೈತ್‌ ಪೇರಡ್ಕ, ಲುಕ್ಮಾನ್‌ ಪೇರಡ್ಕ, ಸಿದ್ದಿಕ್‌ ದೊಡ್ಡಡ್ಕ, ಜುಬೈರ್‌ ದರ್ಖಾಸ್‌, ಜುನೈದ್‌ ಗೂನಡ್ಕ, ಸಿದ್ದಿಕ್‌ ದರ್ಖಾಸ್‌, ಉಬೈಸ್‌ ಗೂನಡ್ಕ, ರಾಜೇಶ್‌ ಬಂಟೋಡಿ, ರವಿ ದೊಡ್ಡಡ್ಕ ಇವರನ್ನು ಶಾಲು ಹೊದಿಸಿ ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಳ್ಳಾಯಿತು.

ಮೆರವಣಿಗೆ ಆರಂಭದ ಸಂದರ್ಭದಲ್ಲಿ ಮಹಮ್ಮದ ಕುಂಞಿ ಗೂನಡ್ಕ ಪ್ರಾಸ್ತಾವಿಕ ಮಾತನಾಡಿದರು. ಸಭೆ ಆರಂಭದಲ್ಲಿ ಕೆ.ಪಿ. ಜಾನಿ ಮಾತನಾಡಿದರು. ಲೂಕಸ್‌ ಟಿ.ಐ ರವರು ಕಾರ್ಯಕ್ರಮ ನಿರೂಪಿಸಿದರು. ವಸಂತ ಪೆಲ್ತಡ್ಕ ರವರು ವಂದಿಸಿದರು.