ಡಿ.09: ಪಂಜದಲ್ಲಿ ಸಮಗ್ರ ಕೃಷಿ ಕಾರ್ಯಾಗಾರ

0

ಕರ್ನಾಟಕ ಆಗೋ ಕೆಮಿಕಲ್ಸ್ (ಮಲ್ಟಿಪ್ಲೆಕ್ಸ್) ಬೆಂಗಳೂರು ಮತ್ತು ಪಂಜ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘ ನಿಯಮಿತ, ಕರಾವಳಿ ಎಂಟರ್‌ಪ್ರೆಸಸ್ ಸುಳ್ಯ ಇವರುಗಳ ಸಂಯುಕ್ತ ಆಶ್ರಯದಲ್ಲಿ ಸಮಗ್ರ ಕೃಷಿ ಕಾರ್ಯಾಗಾರ ಡಿ.9 ರಂದು ಬೆಳಿಗ್ಗೆ ಗಂಟೆ 10.00ಕ್ಕೆ ಪಂಜ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಸಭಾಭವನದಲ್ಲಿ ನಡೆಯಲಿದೆ.

ಅಡಿಕೆ, ತೆಂಗು, ಕಾಳುಮೆಣಸು, ಕೊಕ್ಕೋ, ರಬ್ಬರ್ ಹಾಗೂ ಕಾಫಿ ಬೆಳೆಯ ಬೇಸಾಯ ಕ್ರಮ ಹಾಗೂ ರೋಗ ಕೀಟಗಳ ನಿರ್ವಹಣೆಯ ಬಗ್ಗೆ ಸಮಗ್ರ ಮಾಹಿತಿ ಹಾಗೂ ವಿಶೇಷವಾಗಿ, ಹಳದಿರೋಗ, ಎಲೆಚುಕ್ಕಿ ರೋಗ, ಮಣ್ಣುಪರೀಕ್ಷೆ ಬಗ್ಗೆ ಕಾರ್ಯಾಗಾರ ನಡೆಯಲಿದೆ. ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಂದ್ರಶೇಖರ ಶಾಸ್ತ್ರಿ ಸಭಾಧ್ಯಕ್ಷತೆ ವಹಿಸಲಿದ್ದಾರೆ.
ಡಾ. ಎಂ. ನಾರಾಯಣ ಸ್ವಾಮಿ, MSc, Phd (ಮಾರುಕಟ್ಟೆ ಮುಖ್ಯಸ್ಥರು, ತಾಂತ್ರಿಕ ಮುಖ್ಯಸ್ಥರು, ಕರ್ನಾಟಕ ಆಗೋ ಕೆಮಿಕಲ್ಸ್, ಬೆಂಗಳೂರು)ತಾಂತ್ರಿಕ ಸಲಹೆ ನೀಡಲಿದ್ದಾರೆ.