ವೈದ್ಯಕೀಯ ಸಾಹಿತ್ಯ, ಸಾಮಾಜಿಕ ಸೇವೆ ಮತ್ತು ವೈದ್ಯಕೀಯ ವೃತ್ತಿಯಲ್ಲಿ ನೀಡಿದ ಕೊಡುಗೆಯನ್ನು ಗುರುತಿಸಿ, 2025ನೇ ಸಾಲಿನ ವಿಶೇಷ ಸಾಧಕ ಪುರಸ್ಕಾರವನ್ನು ಡಾ| ಮುರಲೀ ಮೋಹನ್ ಚೂಂತಾರ್‌ರವರಿಗೆ ಇತ್ತೀಚೆಗೆ ವಿಯೆಟ್ನಾಂ ದೇಶದ ಹಂ.ಬೆ.ಮಿನ್ ನಗರದಲ್ಲಿ ಪ್ರದಾನ ಮಾಡಲಾಯಿತು.
ನವೆಂಬರ್ 13ರಿಂದ 15ರವರೆಗೆ ವಿಯೆಟ್ನಾಂ ದೇಶದ ಹೂ ಚಿಮಿನ್ ನಗರದಲ್ಲಿ ನಡೆದ ಇಂಡಿಯಾ – ವಿಯೆಟ್ನಾಂ ವ್ಯಾವಹಾರಿಹ ಸಮಾವೇಶದಲ್ಲಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ವಿಯೆಟ್ನಾ ದೇಶದಲ್ಲಿ ಭಾರತದ ರಾಯಭಾರಿಯಾಗಿರುವ ಮಹೇಶ್ ಚಂದಗಿರಿಯವರು ಈ ಪ್ರಶಸ್ತಿ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಕನ್ನಡ ಪ್ರಭ ಮತ್ತು ಸುವರ್ಣ ಟಿವಿ ಮುಖ್ಯ ಸಂಪಾದಕ ಹಾಗೂ ಸಂಚಾಲಕರಾದ ರವಿ ಹೆಗಡೆ ಉಪಸ್ಥಿತರಿದ್ದರು.















ಕನ್ನಡ ಪ್ರಭಾ ಮತ್ತು ಸುವರ್ಣ ಸುದ್ದಿ ಕಾರ್ಯಕ್ರಮವನ್ನು ಜಂಟಿಯಾಗಿ ಆಯೋಜಿಸಿತ್ತು. ಹೂ.ಚಿ.ಮಿನ್ ನಗರದ ಈಶ್ವಟೋರಿಯಲ್ ಹೋಟಲಿನಲ್ಲಿ ಸಮಾರಂಭ ಜರಗಿತು. ವೈದ್ಯಕೀಯ ಸಾಹಿತ್ಯ ಕ್ಷೇತ್ರದಲ್ಲಿ ಸಾವಿರಾರು ಲೇಖನಗಳನ್ನು ಬರೆದು ಜನಪ್ರಿಯ ವೈದ್ಯ ಸಾಹಿತಿ ಎಂದು ಡಾ| ಚೂಂತಾರು ರಾಜ್ಯದಾದ್ಯಂತ ಗುರುತಿಸಿಕೊಂಡಿದ್ದಾರೆ. ಇದಲ್ಲದೆ ಹತ್ತು ವರುಷಗಳ ಕಾಲ ದ.ಕ.ಜಿಲ್ಲಾ ಗೃಹರಕ್ಷಕದಳದ ಸಮಾದೋಪರಾಗಿ ನಿಷ್ಣಾತ ಸೇವೆ ಸಲ್ಲಿಸಿ, ಮುಖ್ಯಮಂತ್ರಿಗಳ ಚಿನ್ನದ ಪದಕ ಮತ್ತು ರಾಷ್ಟಪತಿಗಳ ವಿಶಿಷ್ಟ ಸೇವಾ ಪದಕಕ್ಕೂ ಬಾಜನರಾಗಿದ್ದಾರೆ. ಸುಮಾರು 15 ವೈದ್ಯಕೀಯ ಸಾಹಿತ್ಯ ಕೃತಿಗಳನ್ನು ಬರೆದು ಪ್ರಕಟಿಸಿರುತ್ತಾರೆ. ಕಳೆದು 30 ವರುಷಗಳಿಂದ ಮಂಜೇಶ್ವರದ ಹೊಸಂಗಡಿ ಎಂಬಲ್ಲಿ ಗ್ರಾಮೀಣ ಪ್ರದೇಶದಲ್ಲಿ ವಿಶ್ವದರ್ಜೆಯ ರಾಸ ಚಿಕಿತ್ಸೆ ನೀಡಿ ಜನಾನುರಾಗಿ ದಂತವೈದ್ಯ ಮತ್ತು ಶಸ್ತ್ರ ಚಿಕಿತ್ಸಕ ಎಂದು ಗುರುತಿಸಿಕೊಂಡಿದ್ದಾರೆ.
ಮಂಗಳೂರಿನ ನಿವಾಸಿಯಾಗಿರುವ ಇವರು ತಮ್ಮ ತಾಯಿ ದಿವಂಗತ ಚೂಂತಾರು ಸರೋಜಿನಿ ಭಟ್ ಅವರ ನೆನಪಿನಲ್ಲಿ ಪ್ರತಿಷ್ಠಾನ ನಡೆಸುತ್ತಿದ್ದು, ನೂರಾರು ವೈದ್ಯಕೀಯ ಶಿಬಿರ, ರಕ್ತದಾನ ಶಿಬಿರ ನಡೆಸಿ, ಉತ್ತಮ ಸಂಘಟಕ ಎಂದೂ ಗುರುತಿಸಿಕೊಂಡಿದ್ದಾರೆ. ಇವರ ಸಾಮಾಜಿಕ, ವೈದ್ಯಕೀಯ ಮತ್ತು ಸಾಹಿತ್ಯ ಕ್ಷೇತ್ರದ ಸಾಧನೆಯನ್ನು ಕನ್ನಡ ಪ್ರಭ ಗುರುತಿಸಿ ಗೌರವಿಸಿರುತ್ತದೆ.










