ಹೊಲಿಗೆ ಯಂತ್ರ, ಲ್ಯಾಪ್ಟಾಪ್ ಕೊಡುಗೆ, ಧನ ಸಹಾಯ, ಸನ್ಮಾನ ಕಾರ್ಯಕ್ರಮ
ರೋಟರಿ ಕ್ಲಬ್ ಸುಬ್ರಹ್ಮಣ್ಯ ಇದರ 2024-25 ನೇ ನೂತನ ಪದಾಧಿಕಾರಿಗಳ ಸ್ಥಾಪನೆ ಸಮಾರಂಭ ಕುಮಾರಸ್ವಾಮಿ ವಿದ್ಯಾಲಯದಲ್ಲಿ ಜು.13 ರ ಸಂಜೆ ನಡೆಯಲಿದೆ ಎಂದು ನೂತನ ಅಧ್ಯಕ್ಷ ಚಂದ್ರಶೇಖರ ನಾಯರ್ ಜು.10 ರಂದು ನಡೆದ ಪತ್ರಿಕಾ ಗೋಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು.
ಪದಗ್ರಹಣ ಅಧಿಕಾರಿಯಾಗಿ ರೋಟರಿ ಜಿಲ್ಲಾ ಸಹಾಯಕ ಪ್ರಾದೇಶಿಕ ಸಮನ್ವಯಾಧಿಕಾರಿ ರೊl. ಎಂ.ರಂಗನಾಥ ಭಟ್ ಇರಲಿದ್ದಾರೆ.

ಪದಗ್ರಹಣ ಸಮಾರಂಭದಲ್ಲಿ ಅರ್ಹ ಫಲಾನುಭವಿಗಳಿಗೆ ಹೊಲಿಗೆ ಯಂತ್ರ ಕೊಡುಗೆ, ಬಡ ವಿದ್ಯಾರ್ಥಿಗೆ ಲ್ಯಾಪ್ ಟಾಪ್ ಕೊಡುಗೆ, ಅಂಗನವಾಡಿ ಮೂಲ ಸೌಕರ್ಯ ಕ್ಕೆ ಧನ ಸಹಾಯ, ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ, ರಾಜ್ಯ ಮಟ್ಟದ ಶಟಲ್ ಆಟಗಾರನಿಗೆ ಕ್ರೀಡಾ ಪರಿಕರ ಕೊಡುಗೆ ಮತ್ತಿತರರ ಸಮಾಜಮುಖಿ ಕಾರ್ಯಕ್ರಮ ನಡೆಯಲಿದೆ ಎಂದವರು ತಿಳಿಸಿದರು.
ಮುಖ್ಯ ಅತಿಥಿಯಾಗಿ ವಿದ್ಯಾರಶ್ಮಿ ವಿದ್ಯಾಲಯ, ಸವಣೂರು ಇದರ ಸೀತಾರಾಮ ರೈ ಸವಣೂರು ಇರಲಿದ್ದಾರೆ. ಗೌರವ ಅತಿಥಿಗಳಾಗಿ ಝೋನ್ 5 ಸಹಾಯಕ ಗವರ್ನರ್ ವಿನಯ ಕುಮಾರ್, ಝೋನಲ್ ಲೆಫ್ಟಿನೆಂಟ್ ವಿಶ್ವನಾಥ ನಡುತೋಟ, ಸುಳ್ಯ ರೋಟರಿ ಕ್ಲಬ್ ನ ಅಧ್ಯಕ್ಷೆ ಯೋಗಿತಾ ಗೋಪಿನಾಥ್ ವೇದಿಕೆಯಲ್ಲಿ ಇರಲಿದ್ದಾರೆ ಎಂದವರು ತಿಳಿಸಿದರು.



ಕಾರ್ಯದರ್ಶಿ ಚಿದಾನಂದ ಕುಳ, ಖಜಾಂಜಿ ಜಯಪ್ರಕಾಶ್, ಹಾಲಿ ಅಧ್ಯಕ್ಷ ಪ್ರಶಾಂತ್ ಕೋಡಿಬೈಲು, ಕಾರ್ಯದರ್ಶಿ ಮೋಹನ್ ದಾಸ್ ಎಣ್ಣೆಮಜಲು ಗೋಷ್ಠಿಯಲ್ಲಿ ಇದ್ದರು.