ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರಾ ಸ್ನಾನಘಟ್ಟ ಮುಳುಗಡೆ

0

ಯಾತ್ರಾರ್ಥಿಗಳಿಗೆ ತೀರ್ಥಸ್ನಾನ ನೆರವೇರಿಸಲು ಪರ್ಯಾಯ ವ್ಯವಸ್ಥೆ

ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರಾ ಸ್ನಾನಘಟ್ಟ ಇಂದು ಮುಳುಗಡೆಯಾಗಿದ್ದು
ಯಾತ್ರಾರ್ಥಿಗಳಿಗೆ ತೀರ್ಥಸ್ನಾನ ನೆರವೇರಿಸಲು ಪರ್ಯಾಯ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.


ನದಿ ನೀರನ್ನು ಡ್ರಮ್ ಮೂಲಕ ಸಂಗ್ರಹಿಸಿ ಭಕ್ತರಿಗೆ ತೀರ್ಥಸ್ನಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ತುಂಬಿ ಹರಿಯುತ್ತಿರುವ ಕುಮಾರಧಾರಾ ನದಿ ಪಾತ್ರಕ್ಕೆ ಭಕ್ತಾಧಿಗಳು ತೆರಳದಂತೆ ಕ್ಷೇತ್ರದ ವತಿಯಿಂದ ಸೂಚನೆ ನೀಡಲಾಗಿದ್ದು ಸ್ನಾನಘಟ್ಟದ ಬಳಿ ಹೋಮ್ ಗಾರ್ಡ್ ಮತ್ತು ದೇವಸ್ಥಾನದ ಸೆಕ್ಯುರಿಟಿಗಳು ನಿಗಾ ವಹಿಸಿದ್ದಾರೆ.