ಎಡಮಂಗಲ : ಸೂಟೆಮಜಲಿನಲ್ಲಿ ಮರ ಬಿದ್ದು ಚರಂಡಿ ಬ್ಲಾಕ್

0

ಕಾಂಪೌಂಡ್ ಕುಸಿತ, ಮನೆಯಂಗಳಕ್ಕೆ ನುಗ್ಗಿದ ನೀರು

ಎಡಮಂಗಲ ಗ್ರಾಮದ ಸೂಟೆಮಜಲಿನಲ್ಲಿ ಭಾರಿ ಮಳೆಗೆ ಭಾರಿ ಎತ್ತರದ ಮರ ಒಂದು ಚರಂಡಿಗೆ ಬುಡ ಸಮೇತ ಕಿತ್ತು ಚರಂಡಿ ಬ್ಲಾಕ್ ಆದ ಘಟನೆ ವರದಿಯಾಗಿದೆ.

ಪರಿಣಾಮ ಪಕ್ಕದ ಎರಡು ಮನೆಯ ಅಂಗಳಕ್ಕೆ ನೀರು ನುಗ್ಗಿದ್ದು, ಇನ್ನೊಂದು ಮನೆಯ ಕಾಂಪೌಂಡ್ ಕುಸಿದು ಬಿತ್ತು. ಮಳೆಯ ಕೆಸರು ನೀರು ಮನೆಯ ಸುತ್ತ ಆವರಿಸಿ ದುರ್ನಾತ ಬರುತ್ತಿತ್ತು. ಸಂಬಂಧ ಪಟ್ಟವರು ಮರತೆರವು ಉಳಿಸಿ ಚರಂಡಿಯ ಊಳು ತೆಗೆಸಿದರೆ ಸಾರ್ವಜನಿಕರಿಗೆ, ಪಕ್ಕದ ಮನೆಯವರಿಗೂ ತೊಂದರೆ ತಪ್ಪಬಹುದು. ಮಳೆ ಬಂದರೆ ಅಲೆಕ್ಕಾಡಿ – ಕೋಟಿ ಚೆನ್ನಯ ದ್ವಾರದಿಂದ ಬೊಳ್ಕಜೆಯವರೆಗೆ ರಸ್ತೆ ತೋಡಾಗಿ ಪಾದಚಾರಿಗಳು ಶಾಲಾ ಮಕ್ಕಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.