ಮಯೂರ್ ಎನ್ .ಪಿ. ಗುಡ್ಡೆಮನೆ ಅಥ್ಲೆಟಿಕ್ ನಲ್ಲಿ ಪ್ರಥಮ

0

ದ. ಕ.ಜಿ.ಪ.
ಹೈಸ್ಕೂಲ್ ವಿಭಾಗದ ಕ್ರೀಡಾಕೂಟದಲ್ಲಿ ಮಂಗಳೂರು ಮಂಗಳ ಸ್ಟೇಡಿಯಂನಲ್ಲಿ ನಡೆದ ಅಥ್ಲೆಟಿಕ್ ವಿಭಾಗದಲ್ಲಿ ನಡುತೋಟ ಗುಡ್ಡೆಮನೆ ಮಯೂರ್ ಎನ್.ಪಿ. ಇವರು 4×400 ಮೀಟರ್ ರಿಲೇ ಓಟದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.
ಈತ ರಾಮಕುಂಜದ ಶ್ರೀರಾಮಕಂಜೇಶ್ವರ ಪ್ರೌಢಶಾಲೆ ಯ 10ನೇ ತರಗತಿ ವಿದ್ಯಾರ್ಥಿ. ಬಾಳುಗೋಡು ಗ್ರಾಮದ ನಡುತೋಟ ಗುಡ್ಡೆಮನೆ ಹೇಮಲತಾ- ಪದ್ಮನಾಭ ಗೌಡ ದಂಪತಿಯ ಪುತ್ರ. ಮುಂದೆ ಬೀದರ್ ನಲ್ಲಿ ನಡೆಯುವ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.