ಕೇರ್ಪಳ ಶ್ರೀಕೃಷ್ಣ ಜನ್ಮಾಷ್ಟಮಿ – ಮೂವರಿಗೆ ಪಯಸ್ವಿನಿ ಗೌರವ ಪ್ರದಾನ

0

ಶ್ರೀಕೃಷ್ಣನ ಆದರ್ಶ ಅಳವಡಿಸೋಣ : ಡಾ.ಗಿರೀಶ್ ಭಾರದ್ವಾಜ್

ಸುಳ್ಯ ಕೇರ್ಪಳ ಪಯಸ್ವಿನಿ ಯುವಕ ಮಂಡಲ, ಪಯಸ್ವಿನಿ ಹಿರಿಯ ವಿದ್ಯಾರ್ಥಿ ವೃಂದ, ಕೇರ್ಪಳ, ಕುರುಂಜಿ, ಕುರುಂಜಿಗುಡ್ಡೆ, ಭಸ್ಮಡ್ಕ ಊರವರ ಸಹಕಾರದೊಂದಿಗೆ 33 ನೇ ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ಪಯಸ್ವಿನಿ ಗೌರವ ಪ್ರದಾನ ಸಮಾರಂಭ ಆ.25ರಂದು ಕೇರ್ಪಳ ಶಾಲಾ ವಠಾರದಲ್ಲಿ ನಡೆಯಿತು.

ಸಂಜೆ ನಡೆದ ಸಮಾರೋಪ ಸಮಾರಂಭ ಅಧ್ಯಕ್ಷತೆಯನ್ನು ಯುವಕ ಮಂಡಲದ ಅಧ್ಯಕ್ಷ ಭರತ್ ಕುರುಂಜಿ ವಹಿಸಿದ್ದರು. ಪದ್ಮಶ್ರೀ ಪುರಸ್ಕೃತ ಡಾ.ಗಿರೀಶ್ ಭಾರದ್ವಾಜ್ ಪಯಸ್ವಿನಿ ಪುರಸ್ಕಾರ ಪ್ರದಾನ ಮಾಡಿದರು.


ಯುವಜನ ಸಂಯುಕ್ತ ಮಂಡಳಿ ಪೂರ್ವಾಧ್ಯಕ್ಷ ದಿನೇಶ್ ಮಡಪ್ಪಾಡಿ ಬಹುಮಾನ ವಿವರಿಸಿದರು.

ಮುಖ್ಯ ಅತಿಥಿಗಳಾಗಿ ಸುಳ್ಯ‌ಎನ್ನೆಂಸಿ‌ ವಾಣಿಜ್ಯ ಶಾಸ್ತ್ರ ಉಪನ್ಯಾಸಕಿ ಶ
ರತ್ನಾವತಿ ಡಿ, ಸುಳ್ಯ ನ.ಪಂ. ಸದಸ್ಯರುಗಳಾದ ಪೂಜಿತಾ ಕೆ.ಯು., ಸುಧಾಕರ ಕುರುಂಜಿಭಾಗ್, ಸುಳ್ಯ ಸಿ.ಎ.ಬ್ಯಾಂಕ್ ನಿರ್ದೇಶಕ ಶಿವರಾಮ ಕೇರ್ಪಳ, ಯುವಜನ ಸಂಯುಕ್ತ ಮಂಡಳಿ ಪೂರ್ವಾಧ್ಯಕ್ಷ ದಯಾನಂದ ಕೇರ್ಪಳ, ವಿಶ್ವ ಯುವಕ ಮಂಡಲ ಬಾಳುಗೋಡು ಇದರ ಅಧ್ಯಕ್ಷ ರಾಜೇಶ್ ಕಿರಿಭಾಗ, ಮಂಗಳೂರು ಸೀ ಆಪರೇಷನ್ ಶಿಪ್ವೇವ್ಸ್ ಆನ್ಲೈನ್ ನ ಸೀನಿಯರ್ ಮ್ಯಾನೇಜರ್ ಶಿವರಾಜ ಕೇರ್ಪಳ ಮುಖ್ಯ ಅತಿಥಿಗಳಾಗಿದ್ದರು.

ಪಯಸ್ವಿನಿ‌ ಗೌರವ : ಸಮಾರಂಭದಲ್ಲಿ ಸುಳ್ಯ ಸಿಡಿಪಿಒ ಶ್ರೀಮತಿ ಶೈಲಜಾ ದಿನೇಶ್, ಸಿ.ಎ. ಪರೀಕ್ಷೆಯಲ್ಲಿ ತೇರ್ಗಡೆಯಾದ ಆಶೀಶ್ ರವರ ಪರವಾಗಿ ಅವರ ತಂಡೆ ಆನಂದ ಖಂಡಿಗ ಹಾಗೂ ಶೋಭಾ ಆನಂದ್, ಯುವಕ ಮಂಡಲದ ಹಿರಿಯ ಸದಸ್ಯ ಮೋಹನ್ ರೈ ಕಲ್ಲುಮುಟ್ಲುರಿಗೆ, ಮೆನ್ ಗಳಾದ ಅರುಣ್ ಕುಮಾರ್ ಹಾಗೂ ತನ್ವಿರ್ ರನ್ನು ಸನ್ಮಾನಿಸಲಾಯಿತು.

2024 ನೇ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿ ಪರೀಕ್ಷೆ ಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ಯುವಕ ಮಂಡಲ ಅಧ್ಯಕ್ಷ ಭರತ್ ಕುರುಂಜಿ ಸ್ವಾಗತಿಸಿದರು. ಪೂರ್ವಾಧ್ಯಕ್ಷ ಚಂದ್ರಶೇಖರ ಕೇರ್ಪಳ ವಂದಿಸಿದರು.
ವಿನ್ಯಾಸ್ ಕುರುಂಜಿ ಪ್ರಶಸ್ತಿ ಪುರಸ್ಕೃತರ ಪಟ್ಟಿ ವಾಚಿಸಿದರು.