ಸೆ.6 – 8: ಕೊಡಗು ಸಂಪಾಜೆ ಸಾರ್ವಜನಿಕ ಶ್ರೀ ದೇವತಾರಾಧನ ಸಮಿತಿ ವತಿಯಿಂದ ಗೌರಿ – ಗಣೇಶೋತ್ಸವ

0

ಕೊಡಗು ಸಂಪಾಜೆ ಸಾರ್ವಜನಿಕ ಶ್ರೀ ದೇವತಾರಾಧನ ಸಮಿತಿಯ ವತಿಯಿಂದ 31ನೇ ವರ್ಷದ ಶ್ರೀ ಗೌರಿ ಗಣೇಶೋತ್ಸವವು ಸಂಪಾಜೆ ಶ್ರೀ ಪಂಚಲಿಂಗೇಶ್ವರ ಸಭಾಂಗಣದಲ್ಲಿ ಸೆ.6ರಿಂದ 8ರವರೆಗೆ ಜರುಗಲಿದೆ.

ಸೆ.6ರಂದು ಬೆಳಿಗ್ಗೆ ಗಣಪತಿ ಹೋಮ, ಬಳಿಕ ಗೌರಿ – ಗಣೇಶ ಮೂರ್ತಿಗಳನ್ನು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಿಂದ ತಂದು ಸ್ಥಳ ಶುದ್ಧಿಯೊಂದಿಗೆ ಉತ್ಸವ ಸ್ಥಳದಲ್ಲಿ ಪ್ರತಿಷ್ಠಾಪನೆ, ಲಲಿತ ಸಹಸ್ರನಾಮ ಪಠಣ, ಮಹಾ ಮಂಗಳಾರತಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರುಗಲಿದೆ‌.


ಗೌರಿ ಗಣೇಶೋತ್ಸವ ಪ್ರಯುಕ್ತ ಕೆಸರುಗದ್ದೆ ಕ್ರೀಡಾಕೂಟ ನಡೆಯಲಿದ್ದು,ಕ್ರೀಡಾಕೂಟವನ್ನು ನಿವೃತ್ತ ಉಪನ್ಯಾಸಕ ರಾಜಾರಾಮ ಕೀಲಾರು ಅವರು ಉದ್ಘಾಟಿಸಲಿದ್ದಾರೆ.

ಸಂಜೆ ಭಜನಾ ಕಾರ್ಯಕ್ರಮ, ರಾತ್ರಿ ನೃತ್ಯ ವೈವಿಧ್ಯ, ಮಿಮಿಕ್ರಿ ಹಾಗೂ ಶಾಡೋ ಪ್ಲೇ, ಸೆಮಿ ಕ್ಲಾಸಿಕಲ್ ಭರತನಾಟ್ಯ, ರಾತ್ರಿ ಮಹಾಪೂಜೆ, ಅನ್ನಸಂತರ್ಪಣೆ ಜರುಗಲಿದೆ.

ಸೆ.7ರಂದು ಗಣೇಶ ಚೌತಿ ಪ್ರಯುಕ್ತ ಮಹಾಪೂಜೆ, ವೈವಿಧ್ಯಮಯ ಸಂಗೀತ ರಸಮಂಜರಿ, ಶಾಲಾ ಮಕ್ಕಳಿಗೆ ವಿವಿಧ ಸ್ಪರ್ಧೆ, ಮಧ್ಯಾಹ್ನ ಗಣಪತಿ ಸಹಸ್ರನಾಮ ಪಠಣ, ಮಹಾಪೂಜೆ ನಡೆಯಲಿದೆ.


ಸಂಜೆ ಭಜನಾ ಕಾರ್ಯಕ್ರಮ, ರಾತ್ರಿ ಶಾಲಾ ಮಕ್ಕಳಿಂದ ವಿವಿಧ ಕಾರ್ಯಕ್ರಮ, ಭರತನಾಟ್ಯ ನಡೆಯಲಿದೆ.


ರಾತ್ರಿ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ದೇವಸ್ಥಾನದ ಮೊಕ್ತೇಸರ ಎಂ.ಬಿ. ಸದಾಶಿವ ಅವರು ಉದ್ಘಾಟಿಸಲಿದ್ದಾರೆ. ಸಾರ್ವಜನಿಕ ಶ್ರೀ ದೇವತಾರಾಧನ ಸಮಿತಿ ಅಧ್ಯಕ್ಷ ಉದಯ ಹನಿಯಡ್ಕ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ದುರ್ಗಾಪರಮೇಶ್ವರ ಭಟ್ ಅವರು ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ.


ಗೌರವ ಉಪಸ್ಥಿತಿಯಾಗಿ ಸಾರ್ವಜನಿಕ ಶ್ರೀ ದೇವತಾರಾಧನ ಸಮಿತಿಯ ಗೌರವಾಧ್ಯಕ್ಷ ಶಿವರಾಮ ಬಿ.ಆರ್., ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಕೊಡಗು ಸಂಪಾಜೆ ಗ್ರಾ.ಪಂ‌. ಅಧ್ಯಕ್ಷೆ ಶ್ರೀಮತಿ ರಮಾದೇವಿ ಬಾಲಚಂದ್ರ ಕಳಗಿ, ಶ್ರೀ ಪಂಚಲಿಂಗೇಶ್ವರ ದೇವಾಲಯದ ಅಧ್ಯಕ್ಷ ಜಯಕುಮಾರ್ ಚಿದ್ಕಾರ್ ಸೇರಿದಂತೆ ಗಣ್ಯರು ಉಪಸ್ಥಿತರಿರಲಿದ್ದಾರೆ.

ಸೆ.8ರಂದು ಬೆಳಿಗ್ಗೆ ದೇವರಿಗೆ ಮಹಾಪೂಜೆ, ಮಧ್ಯಾಹ್ನ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದ್ದು, ಸಂಪಾಜೆ ವರ್ತಕರ ಸಂಘದ ಅಧ್ಯಕ್ಷ ಯು.ಬಿ. ಚಕ್ರಪಾಣಿ ಅವರು ಬಹುಮಾನ ವಿತರಿಸಲಿದ್ದಾರೆ‌.

ಅಪರಾಹ್ನ ಶ್ರೀ ದೇವರ ಉತ್ಸವ ಮೂರ್ತಿಯ ಶೋಭಾಯಾತ್ರೆಯು ಸಂಪಾಜೆಯಿಂದ ಹೊರಟು, ಚೆಡವಿನ ತನಕ ಸಾಗಿ ಚೌಕಿ ಸಂಗಮದಲ್ಲಿ ಜಲಸ್ಥಂಭನಗೊಳ್ಳಲಿದೆ.