ಸುಳ್ಯದ ಆಯುರ್ವೇದ ಕಾಲೇಜು ಮುಂಭಾಗವಿರುವ ಅಡ್ಕಾರ್ ಆರ್ಕೆಡ್ನಲ್ಲಿ ಕಾರ್ಯಚರಿಸುತ್ತಿರುವ ಅಂಜಲಿ ಮೊಂಟೆಸ್ಸರಿ ಸ್ಕೂಲ್ನಲ್ಲಿ ಸೆ.5ರಂದು ಶಿಕ್ಷರ ದಿನಾಚರಣೆಯನ್ನು ಆಚರಿಸಲಾಯಿತು.

ಮಕ್ಕಳಿಂದಲೇ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಶಾಲಾ ವಿದ್ಯಾರ್ಥಿ ಹೃದಾನ್ ಡಾ.ಸರ್ವಪಲ್ಲಿ ರಾಧಾಕೃಷ್ಣನ್ನವರ ವೇಷ ಧರಿಸಿ ಶಿಕ್ಷಕರ ದಿನಾಚರಣೆಯ ಮಹತ್ವವನ್ನು ತಿಳಿಸಿದರು.








ಸಂಸ್ಥೆಯ ಅಧ್ಯಕ್ಷ ಶುಭಕರ ಬಿ.ಸಿ.ಹಾಗೂ ಸಂಚಾಲಕಿ ಗೀತಾಂಜಲಿಯವರ ವತಿಯಿಂದ ಶಾಲಾ ಶಿಕ್ಷಕ ವೃಂದಕ್ಕೆ ನೆನಪಿನ ಕಾಣಿಕೆ ನೀಡಲಾಯಿತು.
ಎಲ್ಲಾ ಮಕ್ಕಳು ಹಸಿರು ಬಣ್ಣದ ವಸ್ತ್ರದೊಂದಿಗೆ ಈ ದಿನವನ್ನು ಸಂಭ್ರಮಿಸಿದರು.










