ಐವರ್ನಾಡು: 45 ವರ್ಷಗಳ ಹಳೆಯ ವಿದ್ಯುತ್ ಲೈನ್ ನ್ನು ಸರಿಪಡಿಸುವಂತೆ ಬೆಳ್ಳಾರೆ ಉಪವಿಭಾಗದ ಕಿರಿಯ ತಾಂತ್ರಿಕ ಅಧಿಕಾರಿಯವರಿಗೆ ಮನವಿ

0

ಐವರ್ನಾಡು ಗ್ರಾಮ ಪಂಚಾಯಿತಿಗೆ ಒಳಪಟ್ಟ ನಾಟಿಕೇರಿ -ಕಲ್ಲೇರಿ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಅಳವಡಿಸಲಾಗಿರುವ ವಿದ್ಯುತ್ ಸಂಪರ್ಕ ತಂತಿಗಳು ಅಂದಾಜು 45 ವರ್ಷಗಳ ಹಳೆಯದಾಗಿದ್ದು ತಂತಿಗಳು ಸ್ವಾಯತ್ತತೆಯನ್ನು ಕಳೆದುಕೊಂಡು ತುಂಡಾಗಿ ಬೀಳುತ್ತಿದೆ.ಈ ಬಗ್ಗೆ ಈ ಭಾಗದ ಲೈನ್ ಮ್ಯಾನ್ ಗಳ ಗಮನಕ್ಕೆ ತಂದಿದ್ದು ಎಷ್ಟು ಬಾರಿ ಸರಿಪಡಿಸಿದರೂ ಆಗಾಗ ತುಂಡಾಗಿ ಬೀಳುತ್ತಿದ್ದು ರಸ್ತೆಯಲ್ಲಿ ನಡೆದಾಡುವ ಜನಸಾಮಾನ್ಯರಿಗೆ ತೀರಾ ಸಂಕಷ್ಟವಾಗಿದೆ.ಸ್ವಾಯತ್ತತೆಯನ್ನು ಕಳೆದುಕೊಂಡಿರುವ ತಂತಿಯನ್ನು ಬದಲಾಯಿಸಿಕೊಡಲು ವಿದ್ಯುತ್ ಸರಬರಾಜು ಸುಳ್ಯ ತಾಲೂಕು ಬೆಳ್ಳಾರೆ ಉಪವಿಭಾಗದ ಕಿರಿಯ ತಾಂತ್ರಿಕ ಅಧಿಕಾರಿಯಾಗಿರುವ ಕೆ.ವಿ.ಪ್ರಸಾದ್ ರವರಿಗೆ ಮನವಿಯನ್ನು ನೀಡಲಾಯಿತು.

ಮನವಿ ಸ್ವೀಕರಿಸಿದ ಕಿರಿಯ ತಾಂತ್ರಿಕ ಅಧಿಕಾರಿಯವರು ಆದಷ್ಟು ಬೇಗ ಸಮಸ್ಯೆ ಇತ್ಯರ್ಥ ಪಡಿಸುವ ಭರವಸೆಯನ್ನು ನೀಡಿದರು.ಸಂದರ್ಭದಲ್ಲಿ ನಾಟಿಕೇರಿ ಭಾಗದ ಸ್ಥಳೀಯರಾದ ಶ್ರೀ ಸುರೇಶ್ ಕುಲಾಲ್, ಕುಶಾಲಪ್ಪ, ಜಯಂತಗೌಡ, ವೇಣುಗೋಪಾಲ ಇವರೊಂದಿಗೆ ಸಾಮಾಜಿಕ ಹೋರಾಟಗಾರ ಸತ್ಯಶಾಂತಿತ್ಯಾಗಮೂರ್ತಿ ಸೋಣಂಗೇರಿ ಉಪಸ್ಥಿತರಿದ್ದರು.