ಇಂದು ಹಳೆಗೇಟು ಗಣೇಶೋತ್ಸವದ ವೈಭವದ ಶೋಭಾಯಾತ್ರೆ

0

ಹಳೆಗೇಟು ಸಾಂಸ್ಕೃತಿಕ ಸಂಘದ 41 ನೇ ವರ್ಷದ ಗಣೇಶೋತ್ಸವಕ್ಕೆ ಇಂದು ತೆರೆ ಕಾಣಲಿದ್ದು ಅಲಂಕೃತ ವಾಹನದಲ್ಲಿ ನಾಸಿಕ್ ಬ್ಯಾಂಡ್ ಹಾಗೂ ಇನ್ನಿತರ ಕಾರ್ಯಕ್ರಮಗಳೊಂದಿಗೆ ವೈಭವದ ಶೋಭಾಯಾತ್ರೆ ಸಂಜೆ 5 ರಿಂದ ಆರಂಭಗೊಳ್ಳಲಿದೆ.

ಶೋಭಾಯಾತ್ರೆಯು ಹಳೆಗೇಟು ವಸಂತ ಕಟ್ಟೆ ವಠಾರದಿಂದ ಸುಳ್ಯ ಪೇಟೆಯ ಮೂಲಕ ಶ್ರೀರಾಮ್ ಪೇಟೆ, ಶ್ರೀ ಚನ್ನಕೇಶವ ದೇವಸ್ಥಾನ, ವಿವೇಕಾನಂದ ಸರ್ಕಲ್, ಜೆಸಿ ರಸ್ತೆ, ಬಳಿಕ ಹಳೆಗೇಟು ಮೂಲಕ ಮುಖ್ಯರಸ್ತೆಯಲ್ಲಿ ಸಾಗಿ ಹೊಸಗದ್ದೆ ಬ್ರಹ್ಮರಗಯ ಬಳಿ ನದಿಯಲ್ಲಿ ಜಲಸ್ತಂಭನ ಜರುಗಲಿದೆ.

ಶೋಭಾಯಾತ್ರೆಯಲ್ಲಿ ಸುಂದರ ಅಲಂಕೃತ ವಾಹನ ನಾಸಿಕ್ ಬ್ಯಾಂಡ್ ಕುಣಿತ ಭಜನೆ ಮೊದಲಾದ ಕಾರ್ಯಕ್ರಮಗಳು ನಡೆಯಲಿದೆ.