ಸುಳ್ಯ ರೋಟರಿ ಕ್ಲಬ್ ವತಿಯಿಂದ “ನೇಷನ್ ಬಿಲ್ಡರ್ ಅವಾರ್ಡ್” ಪ್ರದಾನ ಮತ್ತು ಶಿಕ್ಷಕರ ದಿನಾಚರಣೆ ಕಾರ್ಯಕ್ರಮ

0


ಸುಳ್ಯ ರೋಟರಿ ಕ್ಲಬ್ ವತಿಯಿಂದ ಸುಳ್ಯದ 4 ಮಂದಿ ಶಿಕ್ಷಕಿಯರಿಗೆ ನೇಷನ್ ಬಿಲ್ಡರ್ ಅವಾರ್ಡ್ ಪ್ರದಾನ ಮಾಡ ಲಾಯಿತು. ಸುಳ್ಯ ನೆಹರು ಮೆಮೋರಿಯಲ್ ಪ.ಪೂ. ಕಾಲೇಜಿನ ಕನ್ನಡ ಉಪನ್ಯಾಸಕಿ ಕು.ಬೇಬಿ ವಿದ್ಯಾ ಪಿ.ಬಿ., ಬೆಳ್ಳಾರೆ ಜ್ಞಾನ ಗಂಗಾ ಪಬ್ಲಿಕ್ ಸ್ಕೂಲ್ ನ ಶಿಕ್ಷಕಿ ಸುಜಾತ ಪ್ರಸನ್ನ ಕಲ್ಲಾಜೆ , ರೋಟರಿ ಪ್ರೌಢ ಶಾಲೆಯ ಶಿಕ್ಷಕಿ ನಳಿನಾಕ್ಷಿ ಕಲ್ಮಡ್ಕ, ರೋಟರಿ ಪ್ರಾಥಮಿಕ ಶಾಲೆಯ ಶಿಕ್ಷಕಿ ರಶ್ಮಿ ಎಸ್ ಎನ್ ಪುರಸ್ಕಾರಕ್ಕೆ ಭಾಜನರಾದರು.

ಕ್ಲಬ್ ಅಧ್ಯಕ್ಷೆ ರೊ.ಯೋಗಿತಾ ಗೋಪಿನಾಥ್ ಅಧ್ಯಕ್ಷತೆ ವಹಿಸಿದ್ದರು.ವೇದಿಕೆಯಲ್ಲಿ ಉಪಾಧ್ಯಕ್ಷರಾದ ರೊ.ಡಾ.ರಾಮ್ ಮೋಹನ್,ಮುಖ್ಯ ಅತಿಥಿ ನಿವೃತ್ತ ಪ್ರಾಧ್ಯಾಪಕ ರೊ.ಬೆಳ್ಯಪ್ಪ ಗೌಡ, ನಿಕಟ ಪೂರ್ವ ಅಧ್ಯಕ್ಷ ರೊ.ಆನಂದ ಖಂಡಿಗ, ಕಾರ್ಯದರ್ಶಿ ರೊ. ಡಾ.ಹರ್ಷಿತ ಪುರುಷೋತ್ತಮ ಉಪಸ್ಥಿತರಿದ್ದರು.

ಸನ್ಮಾನ ಸಮಾರಂಭದಲ್ಲಿ ರೊ. ಚಂದ್ರಶೇಖರ ಪೇರಾಲು ಹಾಗೂ ಛೇರ್ಮನ್ ರೊ. ಗಿರಿಜಾ ಶಂಕರ ತುದಿಯಡ್ಕ ಸಹಕರಿಸಿದರು.ಈ ಸಂದರ್ಭದಲ್ಲಿ ಆಗಮಿಸಿದ ಎಲ್ಲಾ ಶಿಕ್ಷಕರನ್ನು ಗೌರವಿಸಲಾಯಿತು. ರೊ. ಚಂದ್ರಮತಿ ಪ್ರಾರ್ಥಿಸಿ, ಸಮಾರಂಭದ ಅಧ್ಯಕ್ಷರು ಸ್ವಾಗತಿಸಿ, ನಿರ್ವಹಿಸಿದರು. ರೊ. ಡಾ. ವೆಂಕಟೇಶ್ ಸನ್ಮಾನಿತರ ಪರಿಚಯ ವಾಚಿಸಿದರು. ರೊ. ಡಾ. ಹರ್ಷಿತ ಪುರುಷೋತ್ತಮ ವಂದಿಸಿದರು. ಈ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ನ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.