ಸುಳ್ಯ: ಇನ್ನರ್ ವೀಲ್ ಕ್ಲಬ್ ವತಿಯಿಂದ ಶಿಕ್ಷಕ ದಿನಾಚರಣೆ

0

ಸುಳ್ಯ ಇನ್ನರ್ ವೀಲ್ ಕ್ಲಬ್ ವತಿಯಿಂದ ಶಿಕ್ಷಕ ದಿನಾಚರಣೆಯನ್ನು ಸೆ.10 ರಂದು ರೋಟರಿ ಸಭಾಭವದಲ್ಲಿ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಲಬ್ ನ ಅಧ್ಯಕ್ಷರಾದ ಚಿಂತನ ಸುಬ್ರಹ್ಮಣ್ಯ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೋಲ್ಚಾರು ಇಲ್ಲಿಯ ಶಿಕ್ಷಕಿ ಶ್ರೀಮತಿ ಜಲಜಾಕ್ಷಿ ಹಾಗೂ ಕೆವಿಜಿ ಪ್ಲೇ ಹೋಮ್ & ಕಿಂಡರ್ ಗಾರ್ಡನ್ ಇದರ ಶಿಕ್ಷಕಿ ಶ್ರೀಮತಿ ಹೇಮಾ ಅರವಿಂದ ರನ್ನು ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಕ್ಲಬ್ ನ ಕಾರ್ಯದರ್ಶಿ ಡಾ . ಸವಿತಾ ಹೊದ್ದೆಟ್ಟಿ , ಖಜಾಂಜಿ ಡಾ. ಸ್ಮಿತಾ ಹರ್ಷವರ್ಧನ್, ಎಡಿಟರ್ ಪೂಜಾ ಸಂತೋಷ್ ಉಪಸ್ಥಿತರಿದ್ದರು. ಡಾ.ಹರ್ಷಿತಾ ಪುರುಷೋತ್ತಮ ಮತ್ತು ಶೈಮಾ ಜಿತೇಂದ್ರ ಕಾರ್ಯಕ್ರಮ ನಿರೂಪಿಸಿದರು.