ಮೀಲಾದ್ ಪ್ರಯುಕ್ತ ಕಲ್ಲುಗುಂಡಿ ಪೇಟೆಯಲ್ಲಿ ದಫ್ಫ್ ಹಾಗೂ ಸ್ಕೌಟ್ ಪ್ರದರ್ಶನ

0

ಪೇರಡ್ಕ, ಆರಂತೋಡು, ಕಲ್ಲುಗುಂಡಿ, ಗೂನಡ್ಕ, ಸಂಪಾಜೆ ಜುಮಾ ಮಸೀದಿಯ ನೇತೃತ್ವದಲ್ಲಿ ಕಲ್ಲುಗುಂಡಿ ಪೇಟೆಯಲ್ಲಿ ಆಕರ್ಷಕ ದಫ್ಪ್ ಪ್ರದರ್ಶನ ಹಾಗೂ ಸ್ಕೌಟ್ ಪ್ರದರ್ಶನ ಕಾರ್ಯಕ್ರಮ ನಡೆಯಿತು.

ಒಟ್ಟು 8 ಕಲಾ ತಂಡಗಳು ಭಾಗವಹಿಸಿ ವಿಶೇಷ ಗಮನ ಸೆಳೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಕಲ್ಲುಗುಂಡಿ ಜುಮಾ ಮಸೀದಿ ಖತೀಬ್ ಬಹು ಅಬ್ದುಲ್ ನಸೀರ್ ಧಾರಿಮಿ ದುವಾ ಮೂಲಕ ನೆರವೇರಿಸಿದರು. ಕಲ್ಲುಗುಂಡಿ ಜುಮಾ ಮಸೀದಿ ಅಧ್ಯಕ್ಷರಾದ ಎಸ್.ಆಲಿ ಹಾಜಿ ಅಧ್ಯಕ್ಷತೆ ವಹಿಸಿದ್ದರು. ಪೇರಡ್ಕ ಮಸೀದಿ ಅಧ್ಯಕ್ಷರಾದ ಟಿ.ಎಂ.ಶಾಹಿದ್ ತೆಕ್ಕಿಲ್, ಖತೀಬ್ ಉಸ್ತಾದ್ ಬಹು ನಹೀಮ್ ಫೈಝಿ, ಆರಂತೋಡು ಜುಮಾ ಮಸೀದಿ ಅಧ್ಯಕ್ಷರಾದ ಹಾಜಿ ಅಶ್ರಫ್ ಗುಂಡಿ, ಸದರ್ ಉಸ್ತಾದ್ ಬಹು.ನೌಶಾದ್ ಆಜ್ಹರಿ, ಗೂನಡ್ಕ ಜುಮಾ ಮಸೀದಿ ಅಧ್ಯಕ್ಷರಾದ ಮಹಮ್ಮದ್ ಕುಂಞಿಗೂನಡ್ಕ, ಖತೀಬ್ ಬಹು ಅಬೂಬಕ್ಕರ್ ಸಿದ್ದಿಕ್ ಸಖಾಫಿ ಅಲ್ ಅರ್ಶದಿ, ಸಂಪಾಜೆ ಮಸೀದಿ ಕಾರ್ಯದರ್ಶಿ ಅಬ್ಬಾಸ್ ಕೆ.ಕೆ.ಖತೀಬ್ ಅಲ್ ಹಾಜ್ ಜಮಲುದ್ದಿನ್ ಅಲ್ ಅಮಾನಿ, ಸಂಪಾಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಎಸ್.ಕೆ.ಹನೀಫ್, ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಹಮೀದ್ ಕುತ್ತಮೊಟ್ಟೆ, ಸುಳ್ಯ ನಗರ ಪಂಚಾಯತ್ ಸದಸ್ಯರುಗಳಾದ ಶರೀಫ್ ಕಂಠಿ, ಸಿದ್ದಿಕ್ ಕೊಕ್ಕೋ, ಕಲ್ಲುಗುಂಡಿ ಜುಮಾ ಮಸೀದಿ ಮಾಜಿ ಅಧ್ಯಕ್ಷರು ಗಳಾದ ಅಬ್ಬಾಸ್ ಹಾಜಿ ಸಂಟ್ಯಾರ್, ಅಶ್ರಫ್.ಕೆ.ಎಂ, ಇಬ್ರಾಹಿಂ ಎ.ಕೆ. ಅಶ್ರಫ್ ಸಂಟ್ಯಾರ್,ಮಿಲಾದ್ ಸಮಿತಿಯ ಕಲ್ಲುಗುಂಡಿ ಜಮಾಹತ್ ಘಟಕದ ಅಧ್ಯಕ್ಷರಾದ ರಫೀಕ್ ಕೆ.ಎಂ. ಅಬ್ಬಾಸ್ ಎಂ.ಎಂ.ಕಾರ್ಯಕ್ರಮದ ಸಂಘಟಕರಾದ ತಾಜ್ ಮಹಮ್ಮದ್, ರಝಕ್ ಸೂಪರ್, ರಫೀಕ್ ಕರಾವಳಿ, ಉಮ್ಮರ್ ತಾಜ್, ಇರ್ಷಾದ್ ಬದ್ರಿಯಾ,ಹಾರೀಸ್ ಸಿ.ಕೆ ಉಪಸ್ಥಿತರಿದ್ದರು ಕಾರ್ಯಕ್ರಮದ ಸಂಘಟಕರಾದ ಜಿ.ಕೆ.ಹಮೀದ್ ಗೂನಡ್ಕ ನೇತೃತ್ವ ವಹಿಸಿ ಸರ್ವರನ್ನು ಸ್ವಾಗತಿಸಿ ಸಾದಿಕ್ ಚಟ್ಟೆಕಲ್ಲು ವಂದಿಸಿದರು ಕಾರ್ಯಕ್ರಮದಲ್ಲಿ ಭಾಗವಹಿಸಿದ 8 ಕಲಾ ತಂಡಗಳಿಗೆ ಪ್ರಶಸ್ತಿ ಕಪ್ ಹಾಗೂ ನಗದು ಬಹುಮಾನ ನೀಡಲಾಯಿತು.

ಕಲ್ಲುಗುಂಡಿ ಜುಮಾ ಮಸೀದಿಯ ವತಿಯಿಂದ ಲಘು ಉಪಹಾರ ವೆವಸ್ಥೆ ಮಾಡಲಾಯಿತು.ಮೆರವಣಿಗೆ ವೀಕ್ಷಣೆ ಮಾಡಲು ನೂರಾರು ಸಾರ್ವಜನಿಕರು ರಸ್ತೆಯ 2 ಬದಿಯಲ್ಲಿ ಸೇರಿ ಕಲಾ ತಂಡಗಳಿಗೆ ಪ್ರೋತ್ಸಾಹ ನೀಡಿದರು