ಕೊಲ್ಲಮೊಗ್ರು ಹರಿಹರ ಪ್ರಾ.ಕೃ.ಪ.ಸ. ಸಂಘದ ವಾರ್ಷಿಕ ಮಹಾಸಭೆ

0

ಕೊಲ್ಲಮೊಗ್ರು ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2023-24ನೇ ಸಾಲಿನ ಮಹಾಸಭೆಯು ಇಂದು ಹರಿಹರೇಶ್ವರ ಕಲಾ ಮಂದಿರದಲ್ಲಿ ನಡೆಯಿತು.

ಕೊಲ್ಲಮೊಗ್ರು ಹರಿಹರ ಪ್ರಾ.ಕೃ.ಪ ಸಹಕಾರಿ ಸಂಘದ ಅಧ್ಯಕ್ಷ ರಾದ ಹರ್ಷಕುಮಾರ್ ದೇವಜನ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯಕಾರ್ಯನಿರ್ವಹಣಾಧಿಕಾರಿ ಅನಂತರಾಮ ಮಣಿಯಾನ ವರದಿ ಮಂಡಿಸಿದರು.
ಪ್ರಸಕ್ತ ಸಾಲಿನಲ್ಲಿ 1 ಕೋಟಿಯ 15 ಲಕ್ಷ ನಿವ್ವಳ ಲಾಭ, ಶೇ.12 ಡಿವಿಡೆಂಡ್ ಘೋಷಣೆ ವಿಚಾರ ಸಭೆಗೆ ತಿಳಿಸಲಾಯಿತು.

ವೇದಿಕೆಯಲ್ಲಿ ಉಪಾಧ್ಯಕ್ಷರಾದ ಶೇಖರ್ ಅಂಬೆಕಲ್ಲು, ನಿರ್ದೇಶಕ ರಾದ ವಿನೂಪ್ ಮಲ್ಲಾರ, ಮಣಿಕಂಠ ಕೊಳಗೆ, ಗಿರೀಶ್ ಕಟ್ಟೆಮನೆ, ಮೋನಪ್ಪ ಕೊಳಗೆ, ತಾರಾನಾಥ ಮುಂಡಾಜೆ, ವಿಜಯ ಕೆ.ಜೆ, ವಿಜಯ ಕೆ.ಎಸ್, ಸುರೇಶ ಚಾಳೆಪ್ಪಾಡಿ, ಬೊಳಿಯ ಬೆಂಡೋಡಿ, ರಾಜೇಶ್ ಪರಮಲೆ, ಸಹಾಯಕ ಕಾರ್ಯನಿರ್ವಾಹಣಾಧಿಕಾರಿ ಶೇಖರ ಬಟ್ಟೊಡಿ, ಆಂತರಿಕ ಲೆಕ್ಕ ಪರಿಶೋದಕ ಜನಾರ್ದನ ಗುಂಡಿಹಿತ್ಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಭೆಯಲ್ಲಿ
ಡಿವಿಡೆಂಡ್ ಹೆಚ್ಚಳ, ಸಿಬ್ಬಂದಿಗಳ ಪಿ.ಎಫ್ ವಿಚಾರ, ದಿನಸಿ ವಿಭಾಗದಲ್ಲಿ ಸಿಬ್ಬಂದಿಯ ಅವ್ಯಹಾರ, ಹೊಸ ನೇಮಕಾತಿ ವಿಚಾರವಾಗಿ ಸಭೆಯಲ್ಲಿ ಚರ್ಚೆ ನಡೆದವು.
ಮಾಹಾ ಸಭೆಯ ಭೇಡಿಕೆ ಮೇರೆಗೆ ಡಿವಿಡೆಂಟ್ ನ್ನು ಶೇ.10 ರಿಂದ ಶೇ.12 ಕ್ಕೆ ಏರಿಸಲಾಯಿತು.
ಸಭೆಯಲ್ಲಿ ಸಂಘದ ಸದಸ್ಯರಾಗಿದ್ದು ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಯಲ್ಲಿ ಸಾಧನೆ ಗೈದ ವಿದ್ಯಾರ್ಥಿಗಳಿಗೆ ಸಹಾಯ ಹಸ್ತ ಚಾಚಲಾಯಿತು. ಸಿ.ಎ ಪರೀಕ್ಷೆಯಲ್ಲಿ ತೇರ್ಗಡೆಯಾದ ಆಶಿತಾ ಪೊಯ್ಯೆಮಜಲು ಅವರ ಪರವಾಗಿ ಅವರ ತಂದೆಯನ್ನು ಗೌರವಿಸಲಾಯಿತು. ಇತ್ತೀಚೆಗೆ ಪ್ರಕೃತಿ ವಿಕೋಪದಡಿಯಲ್ಲಿ ಮನೆಹಾನಿಗೊಳಗಾದ ಪಳ್ಳತಡ್ಕದ ಎರಡು ಮನೆಯವರಿಗೆ ಪ್ರೊತ್ಸಾಹ ಧನ ವಿತರಿಸಲಾಯಿತು.
ದಿವ್ಯ ಪ್ರಾರ್ಥಿಸಿ, ಹರ್ಷಕುಮಾರ್ ದೇವಜನ ಸ್ವಾಗತಿಸಿದರು,ಶೇಖರ ಅಂಬೆಕಲ್ಲು ದನ್ಯವಾದಗೈದರು