ಜಾಲ್ಸೂರು ಗ್ರಾ.ಪಂ. ಸಹಭಾಗಿತ್ವದಲ್ಲಿ ಬೃಹತ್ ಸ್ವಚ್ಛತಾ ಕಾರ್ಯ

0

ಜಾಲ್ಸೂರು ಗ್ರಾಮ ಪಂಚಾಯತಿ ಸಹಭಾಗಿತ್ವದಲ್ಲಿ ಶ್ರೀ ಸುಬ್ರಹ್ಮಣ್ಯ ಸಂಜೀವಿನಿ ಒಕ್ಕೂಟ, ಗ್ರಾಮದ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಕೃಷಿ, ಪಶುಸಖಿಯ ಸಹಕಾರದೊಂದಿಗೆ ಸ್ವಚ್ಛತೆಯೇ ಸೇವೆ ಕಾರ್ಯಕ್ರಮದಡಿ ಬೃಹತ್ ಸ್ವಚ್ಛತಾ ಕಾರ್ಯವು ಜಾಲ್ಸೂರಿನಲ್ಲಿ ಸೆ.27ರಂದು ನಡೆಯಿತು.

ಜಾಲ್ಸೂರು ಪೇಟೆ, ಅಡ್ಕಾರು ಪೇಟೆ ವಿನೋಬನಗರ ಪೇಟೆ ಪರಿಸರದಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಯಿತು.

ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ತಿರುಮಲೇಶ್ವರಿ ಮರಸಂಕ, ಉಪಾಧ್ಯಕ್ಷೆ ಶ್ರೀಮತಿ ತಿರುಮಲೇಶ್ವರಿ ಅರ್ಭಡ್ಕ, ಪ್ರಭಾರ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಚೆನ್ನಪ್ಪ ನಾಯ್ಕ, ಪ್ರಭಾರ ಕಾರ್ಯದರ್ಶಿ ಸುಂದರ ಮುಪ್ಪೇರ್ಯ, ಗ್ರಂಥಾಲಯ ಮೇಲ್ವಿಚಾರಕಿ ಶ್ರೀಮತಿ ಸುಚಿತ್ರ, ಶ್ರೀ ಸುಬ್ರಹ್ಮಣ್ಯ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ವೇದಾ ಶೆಟ್ಟಿ, ಎಲ್.ಸಿ. ಆರ್. ಪಿ. ಶ್ರೀಮತಿ ಸವಿತ ಪೆರುಮುಂಡ, ಕೃಷಿಸಖಿ ವಿಜಯ ಕಾಳಮನೆ, ಪಶುಸಖಿ ಶ್ರೀಮತಿ ರಶ್ಮಿ ಕಾಳಮ್ಮನೆ, ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು, ಪಂಚಾಯತಿ ಬಿಲ್ ಕಲೆಕ್ಟರ್ ಚಿದಾನಂದ ದರ್ಖಾಸ್ತು, ವಿಕಲಚೇತನ ಪುನರ್ವಸತಿ ಕಾರ್ಯಕರ್ತ ಸದಾನಂದ, ಆಶಾ ಕಾರ್ಯಕರ್ತೆಯರಾದ ಶ್ರೀಮತಿ ಸರಸ್ವತಿ, ಶ್ರೀಮತಿ ಕುಸುಮಾವತಿ, ಶ್ರೀಮತಿ ಶಾರದಾ, ಅಂಗನವಾಡಿ ಕಾರ್ಯಕರ್ತೆಯರಾದ ಶ್ರೀಮತಿ ಗಿರಿಜ, ಶ್ರೀಮತಿ ಕುಮಾರಿ, ಕು. ತುಳಸಿ, ಶ್ರೀಮತಿ ಬೇಬಿ, ಶ್ರೀಮತಿ ರವಿಕಲಾ, ಶ್ರೀಮತಿ ಪ್ರೇಮಲತ ಸೇರಿದಂತೆ ಪಂಚಾಯತಿ ಸಿಬ್ಬದಿಗಳು ಉಪಸ್ಥಿತರಿದ್ದರು.