ಸುಳ್ಯ ಎಪಿಎಂಸಿ ಯಾರ್ಡ್ ನಲ್ಲಿ ವಿದ್ಯುತ್ ಕಂಬಕ್ಕೆ ಹಸಿರು ತೋರಣ..!

0

ಮೆಸ್ಕಾಂ ಗಮನಕ್ಕೆ ಬಂದಿಲ್ಲವೇ – ಎಚ್ಚರ ತಪ್ಪಿದರೆ ಅಪಾಯ

ಸುಳ್ಯದ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ) ಯಾರ್ಡ್ ನೊಳಗೆ ವಿದ್ಯುತ್ ಕಂಬಕ್ಕೆ ಹಸಿರು ತೋರಣ ಹೊದಿಸಲಾಗಿದೆ…!

ವಿದ್ಯುತ್ ಕಂಬಕ್ಕೆ ಕೆಳಗಿನಿಂದ ಹಬ್ಬಿದ ಹಸಿರು ಬಳ್ಳಿ ಕಂಬವನ್ನು ಏರಿ ತಂತಿಗೂ ವ್ಯಾಪಿಸಿದೆ. ಪಕ್ಕದಲ್ಲಿ ಹೆಚ್ ಟಿ ಲೈನ್ ಹಾದು ಹೋಗಿದ್ದು ಇಲ್ಲಿಯೂ ಬಳ್ಳಿಗಳು ಹಬ್ಬಿದೆ.

ಯಾರ್ಡ್ ನೊಳಗೆ ಆದಿತ್ಯವಾರ ಸಂತೆ ವ್ಯಾಪಾರವಿದೆ. ಕ್ಯಾಂಪ್ಕೋ, ಎಪಿಎಂಸಿ ಗೆ ಕೃಷಿಕರು ಬರುತ್ತಿದ್ದಾರೆ. ಎಚ್ಚರ ತಪ್ಪಿದರೆ ಇದರಿಂದ ಅಪಾಯ ಸಂಭವಿಸಬಹುದು. ಆದ್ದರಿಂದ ಮೆಸ್ಕಾಂ ಇಲಾಖೆ ಈ ಕುರಿತು ಗಂಭೀರವಾಗಿ ಪರಿಗಣಿಸಿ ಸಮಸ್ಯೆ ಪರಿಹರಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.