ಕಲ್ಚರ್ಪೆಯ ಕಸದ ಸಮಸ್ಯೆ ಬಗೆಹರಿಸಲು ಸಾಧ್ಯವಿಲ್ಲದಿದ್ದರೆ ಶಾಸಕರು ರಾಜೀನಾಮೆ ನೀಡಲಿ: ಧನಂಜಯ ಅಡ್ಪಂಗಾಯ

0

ಸುಳ್ಯ ನಗರದ ಕಲ್ಚರ್ಪೆಯ ಕಸದ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಾಗದಿ ದ್ದಲ್ಲಿ ಶಾಸಕರು ರಾಜೀನಾಮೆಯನ್ನು ನೀಡಲಿ.ಅವರಿಗೆ ಸಾಧ್ಯ ವಾಗದಿದ್ದರೆ ನಾವು ಮಾಡಿ ತೋರಿಸುತ್ತೇವೆ ಎಂದು ಕಾಂಗ್ರೆಸ್ ಮುಖಂಡ ಕೆ ಪಿ ಸಿ ಸಿ ಕಾರ್ಯದರ್ಶಿ ಧನಂಜಯ ಅಡ್ಪಂಗಾಯ ರವರು ಇಂದು ಸುಳ್ಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ನಗರದ ಅಭಿವೃದ್ಧಿ ಕಾರ್ಯದಲ್ಲಿ ಕ್ಷೇತ್ರದ ಶಾಸಕರ ಪರಿಶ್ರಮ ಬೇಕಾಗಿದೆ. ಇದಕ್ಕೆ ಸಂಭಂದ ಪಟ್ಟ ಅಧಿಕಾರಿಗಳನ್ನು ಕರೆಸಿ ವಾಸ್ತವ ಸ್ಥಿತಿ ಗತಿಯ ಬಗ್ಗೆ ವಿವರಿಸಿ ಸಮಸ್ಯೆಗೆ ಪರಿಹಾರ ನೀಡಬೇಕು. ಅದಲ್ಲದೆ ಇದ್ದರೆ ಅವರು ಏಕೆ ಅಧಿಕಾರದಲ್ಲಿ ಕೂರ ಬೇಕು ಎಂದು ಪ್ರಶ್ನಿಸಿದ್ದಾರೆ.

ಇದೇ ಸಮಯ ನ ಪಂ ಸದಸ್ಯ ಎಂ ವೆಂಕಪ್ಪ ಗೌಡರು ಮಾತನಾಡಿ ನಗರ ಪಂಚಾಯತ್ ನ ಅಧಿಕಾರ ಬಿ ಜೆ ಪಿ ಯವರ ಬಳಿ ಇದೆ. ಪಂಚಾಯತ್ ಸಭೆಯಲ್ಲಿ ಕಸದ ಸಮಸ್ಯೆ ಬಗ್ಗೆ ಬಹಳಷ್ಟು ಚರ್ಚೆಗಳು ನಡೆಯುತ್ತದೆ.ಆದರೆ ಅವರ ಅಧಿಕಾರ ವೈಫಲ್ಯದಿಂದ ಕಸದ ಸಮಸ್ಯೆ ಬಿಗಡಾಯಿಸಿದೆ.
ಏನೇ ಆದರೂ ಸ್ಥಳೀಯ ಜನತೆಗೆ ಯಾವುದೇ ತೊಂದರೆ ಬರದಂತೆ ನೋಡಿಕೊಳ್ಳುವ ಜವಾಬ್ದಾರಿ ನಗರ ಪಂಚಾಯತ್ ಆಡಳಿತಕ್ಕೆ ಇದ್ದು ಇದು ಮಾಡಲೇ ಬೇಕು. ಮುಂದಿನ ಸಭೆಯಲ್ಲಿ ಕಲ್ಲುಚರ್ಪೆಯ ಇತ್ತೀಚಿಗಿನ ಬೆಳವಣಿಗೆ ಬಗ್ಗೆ ಚರ್ಚೆ ಮಾಡಲಿದ್ದೇವೆ ಎಂದು ಹೇಳಿದರು.