ಶಿಕ್ಷಣ ಇಲಾಖೆಯ ಯೋಗ ಸ್ಪರ್ಧೆಯಲ್ಲಿ ಜ್ಞಾನದೀಪ ವಿದ್ಯಾರ್ಥಿ ತನುಷ್ ಎಮ್.ಎಚ್ ರಾಜ್ಯ ಮಟ್ಟಕ್ಕೆ

0

ಇತ್ತೀಚೆಗೆ ಶ್ರೀ ಭುವನೇಂದ್ರ ಕಾಲೇಜ್, ಕಾರ್ಕಳದಲ್ಲಿ ನಡೆದ ಮೈಸೂರು ವಿಭಾಗ ಮಟ್ಟದ ಯೋಗ ಸ್ಪರ್ಧೆಯಲ್ಲಿ ಜ್ಞಾನದೀಪ ವಿದ್ಯಾಸಂಸ್ಥೆಯ ವಿದ್ಯಾರ್ಥಿ ತನುಷ್ ಎಂ.ಎಚ್ ದಕ್ಷಿಣ ಕನ್ನಡ ಜಿಲ್ಲಾ ತಂಡವನ್ನು ಪ್ರತಿನಿಧಿಸಿ 14ರ ವಯೋಮಿತಿಯ ಬಾಲಕರ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಅಕ್ಟೋಬರ್ 9ರಿಂದ 11 ರ ತನಕ ಚಿತ್ರದುರ್ಗದಲ್ಲಿ ನಡೆಯುವ ಕರ್ನಾಟಕ ರಾಜ್ಯಮಟ್ಟದ ಯೋಗ ಸ್ಪರ್ಧೆಯಲ್ಲಿ ಇವರು ಮೈಸೂರು ವಿಭಾಗವನ್ನು ಪ್ರತಿನಿಧಿಸಲಿದ್ದಾರೆ.