ಸುಳ್ಯ ಜಟ್ಟಿಪಳ್ಳ ವಿಶ್ವ ಕಾಂಪ್ಲೆಕ್ಸ್ ನಲ್ಲಿ ಕಾಮತ್ ‘ಸ್ ಹ್ಯಾಪಿ ಫೀಟ್ ಪಾದರಕ್ಷೆ ಮಳಿಗೆ ಶುಭಾರಂಭ

0

ಸುಳ್ಯದ ಜಟ್ಟಿಪಳ್ಳದಲ್ಲಿರುವ ವಿಶ್ವ ಕಾಂಪ್ಲೆಕ್ಸ್ ನಲ್ಲಿ ಹರೀಶ್ ಕಾಮತ್ ಮತ್ತು ಗಣೇಶ್ ಕೌಂಡಿನ್ಯ ರವರ ‌ಪಾಲುದಾರಿಕೆಯ ಕಾಮತ್’ಸ್ ಹ್ಯಾಪಿ ಫೀಟ್ ಪಾದರಕ್ಷೆ ಮಳಿಗೆಯು ಅ.9 ರಂದು ಶುಭಾರಂಭಗೊಂಡಿತು.

ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ ಯವರು ರಿಬ್ಬನ್ ಎಳೆದು ಉದ್ಘಾಟಿಸಿದರು.


ಅರಂತೋಡು- ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ಯವರು ದೀಪ ಪ್ರಜ್ವಲಿಸಿ ಶುಭ ಹಾರೈಸಿದರು. ಅತಿಥಿಗಳಾಗಿ ಸುಳ್ಯ ಬಾಲಾವಲಿಕಾರ್ ರಾಜಾ ಪುರ ಸಾರಸ್ವತ ಸಮಾಜದ ಅಧ್ಯಕ್ಷ ಹೇಮಂತ್ ಕಂದಡ್ಕ, ವಿಶ್ವ ಕಾಂಪ್ಲೆಕ್ಸ್ ಮಾಲಕ ಸಂದೇಶ್ ಕುರುಂಜಿ, ನ.ಪಂ.ಸದಸ್ಯೆ ಶಿಲ್ಪಾ ಸುದೇವ್, ಸ್ವಾತಿ ಹರೀಶ್ ಕಾಮತ್ ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ಹಿರಿಯರಾದ ಮಾಲಕರ ತಂದೆ ನಾರಾಯಣ ನಾಯಕ್,ತಾಯಿ ಜಯಲಕ್ಷ್ಮಿ ನಾಯಕ್ ಹಾಗೂ ಅನಂತಕೃಷ್ಣ ನಾಯಕ್, ವಿಜಯ, ಸುಳ್ಯ ಸಿ.ಎ.ಬ್ಯಾಂಕ್ ಸಿ.ಇ.ಒ ಸುದರ್ಶನ ಜೋಯಿಷ, ದೀಕ್ಷಾ ಟ್ರೇಡರ್ಸ್ ಮಾಲಕ ಮಾಧವ ರಾವ್, ಉದ್ಯಮಿ ಚಂದ್ರಶೇಖರ ಚೋಡಿಪಣೆ,
ಅವಿನ್ ಆಲೆಟ್ಟಿ, ಶರತ್ ಕುಡೆಕಲ್ಲು, ಜಗದೀಶ್, ಅಜಯ್ ಕೃಷ್ಣ, ಸುಜಯ್ ಕೃಷ್ಣ, ನಯನಗೌರಿ ಕೇರ್ಪಳ, ಅನಿಲ್ ಕೇರ್ಪಳ ಮತ್ತಿತರರು ಉಪಸ್ಥಿತರಿದ್ದರು.
ಮಾ|ಆರುಷ್ ಕಾಮತ್ ಮೊದಲ ಗ್ರಾಹಕರಾಗಿ ಪಾದರಕ್ಷೆಯನ್ನು ಖರೀದಿಸಿದರು. ಅರಂತೋಡು ಸೊಸೈಟಿ ಸಿ.ಇ.ಒ ವಾಸುದೇವ ನಾಯಕ್ ರವರು ಸ್ವಾಗತಿಸಿದರು. ಗಣೇಶ್ ಕೌಂಡಿನ್ಯ ವಂದಿಸಿದರು.
ಸುದ್ದಿ ವರದಿಗಾರ ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ನೂತನ ಪಾದರಕ್ಷೆ ಮಳಿಗೆಯಲ್ಲಿ ನವನವೀನ ಮಾದರಿಯ ಪ್ರಖ್ಯಾತ ಕಂಪನಿಯ ಪಾದರಕ್ಷೆ ಗಳು ಸ್ಪರ್ಧಾತ್ಮಕ ದರದಲ್ಲಿ ಲಭ್ಯವಿರುವುದಾಗಿ ಮಾಲಕರು ತಿಳಿಸಿದರು.