ಸುಳ್ಯ ದಸರಾ ಶ್ರೀ ಶಾರದಾ ದೇವಿಯ ಶೋಭಾಯಾತ್ರೆಗೆ ಮೆರುಗು ನೀಡಲಿದೆ

0

ಸುಳ್ಯ ದಸರಾ ಪ್ರಯುಕ್ತ ಶ್ರೀ ಶಾರದಾ ದೇವಿಯ ವೈಭವದ ಶೋಭಾಯಾತ್ರೆಯು ಅ.17 ರಂದು ಸಂಜೆ ನಡೆಯಲಿದ್ದು ಪ್ರತೀ ವರ್ಷದಂತೆ ಈ ವರ್ಷವೂ ಡಿ.ಜೆ.ಫ್ರೆಂಡ್ಸ್ ವತಿಯಿಂದ 6 ನೇ ವರ್ಷದ ಹುಲಿ ವೇಷ ಮತ್ತಷ್ಟು ಮೆರುಗು ನೀಡಲಿದೆ.
ಹುಲಿವೇಷ ಪೂರ್ವಭಾವಿಯಾಗಿ ಊದು ಪೂಜೆಯು ಸುಳ್ಯ ರೋಟರಿ ಶಾಲೆಯ ಮುಂಭಾಗದಲ್ಲಿ ಅ.16 ರಂದು ನಡೆಯಿತು.


ಕಾರ್ಯಕ್ರಮವನ್ನು ಸುಳ್ಯದ ಪ್ರತಿಷ್ಟಿತ ಚಿನ್ನಾಭರಣಗಳ ಮಳಿಗೆ ಮುಳಿಯ ಜ್ಯುವೆಲ್ಲರ್ಸ್ ಮಾಲಕ ಗೋವಿಂದ ಭಟ್ ರವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಡಿ.ಜೆ.ಫ್ರೆಂಡ್ಸ್ ನವರು ಆರನೇ ವರ್ಷದಲ್ಲಿ ಯಶಸ್ವಿಯಾಗಿ ಕಾರ್ಯಕ್ರಮ ನಡೆಸುತ್ತಿರುವುದು ಶ್ಲಾಘನೀಯ.ಇದರಿಂದ ಕಲಾವಿದರಿಗೆ ಅವಕಾಶ ನೀಡಿದಂತಾಗಿದೆ.ಮುಂದೆಯೂ ಇದು ಅತ್ಯಂತ ಯಶಸ್ವಿಯಾಗಿ ನಡೆಯಲಿ ಎಂದು ಶುಭಹಾರೈಸಿದರು.


ಸುಳ್ಯ ಸರ್ಕಲ್ ಇನ್ಸ್ ಪೆಕ್ಟರ್ ತಿಮ್ಮಪ್ಪ ನಾಯ್ಕರವರು ಮಾತನಾಡಿ ಹುಲಿವೇಷ ಕುಣಿತಕ್ಕೆ ವಯಸ್ಸಿನ ಅಂತರವಿಲ್ಲ.ಇದೊಂದು ಸಾಂಪ್ರದಾಯಿಕ ಜಾನಪದ ಕಲೆ ಇದನ್ನು ಉಳಿಸಿಕೊಂಡು ಹೋಗಬೇಕು ಎಂದು ಹೇಳಿದರು.
ನ್ಯಾಯವಾದಿ ಎಂ.ವೆಂಕಪ್ಪ ಗೌಡ,ಹರೀಶ್ ಉಬರಡ್ಕ, ಹಿರಿಯರಾದ ಅರವಿಂದ,ಸಮರ್ಥರಾಮ ಮುಳಿಯ,ಡಿ.ಜೆ.ಫ್ರೆಡ್ಸ್ ನ ಸ್ಥಾಪಕಾಧ್ಯಕ್ಷ ದೀಪಕ್ , ಅಧ್ಯಕ್ಷ ದೀಕ್ಷಿತ್ ರಾವ್,ಉಪಾಧ್ಯಕ್ಷ ಭರತ್ ಪೂಜಾರಿ,ಕಾರ್ಯದರ್ಶಿ ಸಚಿನ್ ಜಾಲ್ಸೂರು,ಖಜಾಂಜಿ ದಿನೇಶ್ ಪಿ.ಎಸ್ .ಹಾಗೂ ಸರ್ವಸದಸ್ಯರು ಉಪಸ್ಥಿತರಿದ್ದರು.


ಕಾರ್ಯಕ್ರಮಕ್ಕೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ,ಮಾಜಿ ಸಂಸದ ನಳಿನ್ ಕುಮಾರ್ ಕಟೀಲು,ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ ,ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ನ ಪ್ರ.ಕಾರ್ಯದರ್ಶಿ ಅಕ್ಷಯ್ ಕೆ.ಸಿ, ಡಾ.ಲೀಲಾಧರ್ ವರು ಆಗಮಿಸಿ ಶುಭಹಾರೈಸಿದರು. ಸಾವಿರಾರು ಜನರು ಹುಲಿವೇಷವನ್ನು ವೀಕ್ಷಿಸಿದರು.