ಬ್ರಹ್ಮರಗಯ ಶ್ರೀ ಅಯ್ಯಪ್ಪ ಗುಡಿ ಸಮಿತಿಯ ವಾರ್ಷಿಕ ಮಹಾಸಭೆ

0

ಹಳೆಗೇಟು ಬ್ರಹ್ಮರಗಯ ಶ್ರೀ ಅಯ್ಯಪ್ಪ ದೇವರ ಗುಡಿ ಸಮಿತಿಯ ವಾರ್ಷಿಕ ಮಹಾಸಭೆ ಹಾಗೂ ನೂತನ ಸಾಲಿನ ಸಮಿತಿ ರಚನಾ ಸಭೆ ಶ್ರೀ ಅಯ್ಯಪ್ಪ ಗುಡಿ ವಠಾರದಲ್ಲಿ ನಡೆಯಿತು.

ಸಮಿತಿ ಅಧ್ಯಕ್ಷ ಗಣೇಶ್ ಶಾಂತಿನಗರ ವಹಿಸಿದ್ದರು. ಗತ ಸಾಲಿನ ವರದಿ ವಾಚನವನ್ನು ಕಾರ್ಯಧರ್ಶಿ ಹರೀಶ್ ಕೆ ಬೆಂಗಳೂರು ವಾಚಿಸಿದರು.ಕೋಶಾಧಿಕಾರಿ ರಮೇಶ್ ಬ್ರಹ್ಮರಗಯ ಲೆಕ್ಕ ಪತ್ರವನ್ನು ಮಂಡಿಸಿದರು.

ಬಳಿಕ ಮುಂದಿನ ದಿನಗಳಲ್ಲಿ ಸಮಿತಿಯ ಮುಂದಿನ ಕ್ರಿಯಾ ಯೋಜನೆಗಳ ಬಗ್ಗೆ ಚರ್ಚೆ ನಡೆಸಲಾಯಿತು.

ಈ ಸಂಧರ್ಭದಲ್ಲಿ ನೂತನ ಸಾಲಿನ ಆಡಳಿತ ಸಮಿತಿ ರಚಿಸಿ ಅಧ್ಯಕ್ಷರಾಗಿ ಗಣೇಶ್ ಶಾಂತಿನಗರ ಮತ್ತು ಪ್ರ. ಕಾರ್ಯದರ್ಶಿಯಾಗಿ ಹರೀಶ್ ಬೆಂಗಳೂರು ಮರು ಆಯ್ಕೆ ಗೊಂಡರು.
ಉಪಾಧ್ಯಕ್ಷರಾಗಿ ಕಾಳಿಯಪ್ಪ ಗುರು ಸ್ವಾಮಿ ಮಿಲಿಟರಿ ಗ್ರೌಂಡ್,ಮುಖ್ಯ ಕೋಶಾಧಿಕಾರಿ ಯಾಗಿ ರಮೇಶ್ ಬ್ರಹ್ಮರಗಯ ಮರು ಆಯ್ಕೆ ಗೊಂಡು ಕೋಶಾಧಿಕಾರಿ ರಾಕೇಶ್ ಕುಂಟಿಕ್ಕಾನ, ಜೊತೆ ಕಾರ್ಯದರ್ಶಿ ಪ್ರವೀಣ್ ಕುಮಾರ್ ಎ ಎಂ ಆಯ್ಕೆ ಗೊಂಡರು.
ಸಮಿತಿಯ ಗೌರವ ಸಲಹೆಗಾರರಾಗಿ ಶ್ರೀಮತಿ ಶಿಲ್ಪಾ ಸುದೇವ್, ಶ್ರೀಮತಿ ಸರೋಜಿನಿ ಪೆಲ್ತಡ್ಕ,ಬಾಲಕೃಷ್ಣ ಭಟ್ ಕೊಡಂಕೇರಿ,ರಾಧಾ ಕೃಷ್ಣ ಮಾಣಿಬೆಟ್ಟು, ರಾಧಾಕೃಷ್ಣ ನಾಯಕ್ ಜಯನಗರ,ಡಾ. ಪ್ರಕಾಶ್ ರಾವ್,ಶ್ರೀಮತಿ ಮಹಾಲಕ್ಷ್ಮಿ ಕೊರಂಬಡ್ಕ ಆಯ್ಕೆ ಗೊಂಡು ಸದಸ್ಯರುಗಳಾಗಿ ರಾಧಾಕೃಷ್ಣ ವಾಗ್ಲೆ,ಸುರೇಶ್ ಕಾಮತ್,ಸುರೇಂದ್ರ ಕಾಮತ್,ಗಿರೀಶ್ ಬೆಟ್ಟಂಪ್ಪಾಡಿ, ಗ್ರಿತೇಶ್ ಬೆಟ್ಟಂಪ್ಪಾಡಿ,ದಾಮೋದರ ಪುತ್ತೂರು,ಗಣೇಶ್ ಕಾಸರಗೋಡು, ಕಾರ್ಮುಗಂ,ಅಜೇಶ್ ಎಚ್ ಅರ್,ದೇವೇಂದ್ರ, ಮಧುಸೂದನ್ ಬೆಟ್ಟಂಪ್ಪಾಡಿ,ಸುದೇವ್ ಜಯನಗರ, ಶಿವನಾಥ್ ರಾವ್ ಹಳೆಗೇಟು,ಕೇಶವ ಮಾಸ್ತರ್ ಹೊಸಗದ್ದೆ,ಶ್ರೀಮತಿ ವೀಣಾ ನಂಬಿಯರ್, ಶ್ರೀಮತಿ ಪುಷ್ಪ ಇವರುಗಳನ್ನು ಆಯ್ಕೆ ಮಾಡಲಾಯಿತು.

ಈ ಸಭೆಯಲ್ಲಿ ಉತ್ಸವ ಸಮಿತಿಗೆ ನೂತನ ಸಮಿತಿ ರಚಿಸಿ ಆದರ ಅಧ್ಯಕ್ಷರಾಗಿ ಪ್ರಸಾದ್ ಎ ಎಸ್ ಜಯನಗರ,ಉಪಾಧ್ಯಕ್ಷರಾಗಿ ಪ್ರಸನ್ನ ಎಂ ಅರ್,ಪ್ರಧಾನ ಕಾರ್ಯದರ್ಶಿ ಅವಿನ್ ಬೆಟ್ಟಂಪ್ಪಾಡಿ,ಕಾರ್ಯದರ್ಶಿ ಗ್ರೀತೇಶ್ ಬೆಟ್ಟಂಪ್ಪಾಡಿ,ಕೋಶಾಧಿಕಾರಿ ಅನುಷ್ ಎಚ್ ಅರ್,ಸದಸ್ಯರುಗಳಾಗಿ ಕುಲದೀಪ್ ಪೆಲ್ತಡ್ಕ,ದೀಕ್ಷಿತ್ ಕುಮಾರ್, ಅಭಿಷೇಕ್ ಜಯನಗರ ,ದಿನೇಶ್ ಕೊಡಿಯಾಲ ಬೈಲು,ಬಾಲೂ ಜಿ ಇವರುಗಳು ಆಯ್ಕೆ ಗೊಂಡರು.

ಕಾರ್ಯಕ್ರಮದ ನಿರೂಪಣೆ ಹಾಗೂ ಸ್ವಾಗತವನ್ನು ಪ್ರವೀಣ್ ಕುಮಾರ್ ಎ ಎಂ ನೆರವೇರಸಿ ಹರೀಶ್ ಕೆ ಬೆಂಗಳೂರು ವಂದಿಸಿದರು.