ವಿಧಾನ ಪರಿಷತ್ ಉಪಚುನಾವಣೆ : ಬೆಳ್ಳಾರೆಯಲ್ಲಿ ಬಿಜೆಪಿ ಪ್ರಚಾರ ಸಭೆ

0

ರಾಜಕೀಯ ಹಿತಕ್ಕಾಗಿ ಕಾಂಗ್ರೆಸ್ ರಾಷ್ಟ್ರ ಹಿತವನ್ನು ಬಲಿಕೊಟ್ಟು ರಾಜಕಾರಣ ನಡೆಸುತ್ತಿದೆ – ಸಿ.ಟಿ. ರವಿ

ಯಾರು ದೇಶ ದ್ರೋಹಿಗಳೆಂದು ಗೊತ್ತಿದ್ದರೂ ಅಂತವರ ಜೊತೆ ಕೈಜೋಡಿಸಿಕೊಂಡು ಮತಾಂಧರಿಗೆ ಕಾಂಗ್ರೆಸ್ ಸರಕಾರ ಕುಮ್ಮಕ್ಕು ಕೊಡುತ್ತಿದೆ. ಹುಬ್ಬಳ್ಳಿಯಲ್ಲಿ ನಡೆದ ಘಟನೆಯಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆದಿರುವುದು ಸಾಬೀತಾದರೂ, ಆಂಜನೇಯ ಸ್ವಾಮಿಯ ದೇವಸ್ಥಾನಕ್ಕೆ ಹಾನಿ ಮಾಡಿರುವುದು ತಿಳಿದರೂ ಅವರನ್ನು ಅಮಾಯಕರೆಂದು ಬಿಂಬಿಸಿ ಅವರ ಮೇಲಿನ ಕೇಸನ್ನು ಹಿಂದಕ್ಕೆ ಪಡೆದಿದೆ. ಕರ್ನಾಟಕದ ಮುಖ್ಯ ಮಂತ್ರಿ ದಡ್ಡ ಅಲ್ಲ. ಕ್ರಿಮಿನಲ್ ಮತ್ತು ಕಮ್ಯುನಲ್ ಪಾಲಿಟಿಕ್ಸ್ ನಲ್ಲಿ ಎಕ್ಸ್ ಫರ್ಟ್. ಕೆಜೆ ಹಳ್ಳಿ, ಡಿಜೆ ಹಳ್ಳಿ ಗಲಭೆಕೋರರ ಮೇಲಿನ ಕೇಸನ್ನೂ ಹಿಂದಕ್ಕೆ ಪಡೆಯಲು ಯೋಚನೆ ಮಾಡ್ತಾ ಇದ್ದಾರಂತೆ. ಪಾಕಿಸ್ತಾನ, ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ ಮಾಡುವುದು ಬಿಟ್ಟು ಮತ ಬ್ಯಾಂಕಿಗಾಗಿ ಅವರ ಓಲೈಕೆಗೆ ಮುಂದಾಗಿದ್ದಾರೆ. ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದರು.ಅವರು ಅ. ೧೮ರಂದು ಬೆಳ್ಳಾರೆಯ ಜೆ.ಡಿ. ಅಡಿಟೋರಿಯಂ ಪೆರುವಾಜೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲರವರ ಅಧ್ಯಕ್ಷತೆಯಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.


ಫ್ರೀ ಬಸ್ ಬಿಟ್ಟರೆ ಕೆಲವು ರೂಟ್ ಗಳಲ್ಲಿ ಬಸ್ ಗಳೆ ಇಲ್ಲ. ಚುನಾವಣೆಗೆ ಮೊದಲು ನಿರುದ್ಯೋಗಿ ಯುವಕರಿಗೆ ತಿಂಗಳಿಗೆ ೩ ಸಾವಿರ ಕೊಡುವ ವಾಗ್ವಾದ. ಈಗ ನೋಡಿದರೆ ಒಬ್ಬನೇ ಒಬ್ಬ ನಿರುದ್ಯೋಗಿದೆ ಯಾವುದೇ ಹಣ ಬಂದಿಲ್ಲ. ಕಳೆದ ಒಂದೂವರೆ ವರ್ಷದಿಂದ ಯಾವುದೇ ಗುತ್ತಿಗೆದಾರರಿಗೆ ಕೆಲಸ ಮಾಡಿಸಿದ ಬಿಲ್ ಬಂದಿಲ್ಲ. ಅನುದಾನಕ್ಕೆ ಬಳಕೆಯಾಗಬೇಕಿದ್ದ ಹಣ ನಕಲಿ ಖಾತೆಗಳಿಗೆ ಜಮೆಯಾಗುತ್ತಿದೆ ಎಂದು ಅವರು ಹೇಳಿದರು.


ಪ್ರಚಾರ ಸಭೆಯ ವೇದಿಕೆಯಲ್ಲಿ ಶಾಸಕಿ ಕು. ಭಾಗೀರಥಿ ಮುರುಳ್ಯ, ದ.ಕ. ಲೋಕಸಭಾ ಕ್ಷೇತ್ರದ ಸಂಸದರಾದ ಕ್ಯಾ. ಬ್ರಿಜೇಶ್ ಚೌಟ, ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ವಿಧಾನ ಪರಿಷತ್ ಅಭ್ಯರ್ಥಿ ಕಿಶೋರ್ ಕುಮಾರ್ ಬೊಟ್ಯಾಡಿ, ಮಾಜಿ ಸಚಿವ ಎಸ್. ಅಂಗಾರ, ಚುನಾವಣಾ ಸಹ ಸಂಚಾಲಕರಾದ ರಾಕೇಶ್ ರೈ ಕೆಡೆಂಜಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಕಾರ್ಯದರ್ಶಿ ಯತೀಶ್ ಆರ್ವಾರ, ರಾಷ್ಟ್ರೀಯ ಕಾರ್ಯಕಾರಿ ಸದಸ್ಯ ಎ.ವಿ. ತೀರ್ಥರಾಮ, ಪುತ್ತೂರಿನ ಮಾಜಿ ಶಾಸಕ ಸಂಜೀವ ಮಠಂದೂರು, ಪ್ರವಾಸ ಪ್ರಮುಖ್ ದೇವದಾಸ್ ಶೆಟ್ಟಿ, ರಾಷ್ಟ್ರೀಯ ಕಾರ್ಯಕಾರಿ ಸದಸ್ಯ ಕೃಷ್ಣ ಶೆಟ್ಟಿ ಕಡಬ, ಜೆಡಿಎಸ್ ರಾಜ್ಯ ಸಮಿತಿ ಸದಸ್ಯ ಕುಂಬ್ರ ದಯಾಕರ ಆಳ್ವ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಬಿಜೆಪಿ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ, ಮಂಡಲ ಸಂಚಾಲಕ ವಿಜಯ ಚಾರ್ಮತ ವಂದಿಸಿದರು. ವಿನಯಕುಮಾರ್ ಕಂದಡ್ಕ ಕಾರ್ಯಕ್ರಮ ನಿರೂಪಿಸಿದರು. ಮಾಜಿ ಜಿ.ಪಂ. ಸದಸ್ಯೆ ಶ್ರೀಮತಿ ಆಶಾ ತಿಮ್ಮಪ್ಪ ವಂದೇ ಮಾತರಂ ಹಾಡು ಹಾಡಿದರು. ಸುಳ್ಯ ತಾಲೂಕಿನ ವಿವಿಧ ಗ್ರಾಮ ಪಂಚಾಯತ್ ಗಳ ಸದಸ್ಯರು, ಸುಳ್ಯ ಪಟ್ಟಣ ಪಂಚಾಯತ್ ಸದಸ್ಯರು, ಬಿಜೆಪಿ ನಾಯಕರು ಸಭೆಯಲ್ಲಿ ಉಪಸ್ಥಿತರಿದ್ದರು.