ನಾಳೆ (ಅ.20 ) : ಸುಬ್ರಹ್ಮಣ್ಯದಲ್ಲಿ ರೋಟರಿ ಜಿಲ್ಲಾ ಸಾಂಸ್ಕೃತಿಕ ಕಲಾ ವೈಭವ

0

ರೋಟರಿ ಜಿಲ್ಲೆ 31 81ರ ನಾಲ್ಕು ಕಂದಾಯ ಜಿಲ್ಲೆಗಳನ್ನು ಒಳಗೊಂಡ ಜಿಲ್ಲಾಮಟ್ಟದ ಸಾಂಸ್ಕೃತಿಕ ಸ್ಪರ್ಧೆ ಕುಮಾರ ಕಲಾ ವೈಭವ ಅ. 20 ರಂದು ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದಲ್ಲಿ ನಡೆಯಲಿರುವುದೆಂದು ಸುಬ್ರಹ್ಮಣ್ಯ ರೋಟರಿ ಕ್ಲಬ್ ಅಧ್ಯಕ್ಷ ಚಂದ್ರಶೇಖರ ನಾಯರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕಲಾ ವೈಭವದಲ್ಲಿ ರೋಟರಿ ಜಿಲ್ಲೆಯ ಒಂಬತ್ತು ವಲಯಗಳಲ್ಲಿ ವಿಜೇತರಾದ ಪ್ರಥಮ ಹಾಗೂ ದ್ವಿತೀಯ ಸ್ಥಾನಗಳು ಭಾಗವಹಿಸಲಿರುವರು.

9 ಮೇಜರ್ ಇವೆಂಟ್ಗಳಲ್ಲಿ 15 ಸ್ಪರ್ಧೆ ನಡೆಯಲಿದೆ.

ಈ ಸ್ಪರ್ಧೆಗಳಲ್ಲಿ ಪುರುಷರು, ಮಹಿಳೆಯರು ಹಾಗೂ ಮಕ್ಕಳ ಎಲ್ಲಾ ವಿಭಾಗಗಳಲ್ಲಿ ನಡೆಯದಿರುವುದು. ಮುಖ್ಯವಾಗಿ ಸೋಲೋ ಸಿಂಗಿಂಗ್, ಡ್ಯೂಎಟ್ ಸಿಂಗಿಂಗ್ ,ಗ್ರೂಪ್ ಡ್ಯಾನ್ಸ್, ಸ್ಕಿಟ್ ಸ್ಪರ್ಧೆಗಳು ನಡೆಯಲಿರುವುದು.

ಕಾರ್ಯಕ್ರಮವನ್ನು ಬೆಳಿಗ್ಗೆ ರೋಟರಿ ಜಿಲ್ಲೆ 31 81ರ ಜಿಲ್ಲಾ ಗವರ್ನರ್ ವಿಕ್ರಮ ದತ್ತ ಉದ್ಘಾಟಿಸಲಿರುವರು.

ಸುದ್ದಿಗೋಷ್ಠಿಯಲ್ಲಿ ರೋಟರಿ ಜಿಲ್ಲಾ ಸಾಂಸ್ಕೃತಿಕ ಸ್ಪರ್ಧೆಗಳ ವೈಸ್ ಚೇರ್ಮನ್ ಗೋಪಾಲ್ ಎಣ್ಣೆ ಮಜಲ್, ಇವೆಂಟ್ ಚೇರ್ಮನ್ ಬಾಲಕೃಷ್ಣ ಪೈ ಉಪಸ್ಥಿತರಿದ್ದರು.